ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅ.29ರಂದು ಬಾಳ್ತಿಲ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ, 13 ಪ್ರಥಮ, 3ದ್ವಿತೀಯ ಹಾಗೂ 4 ತೃತೀಯಒಟ್ಟು 20 ಬಹುಮಾನವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕಿರಿಯ ವಿಭಾಗದಲ್ಲಿ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ 4ನೇ ತರಗತಿಯ ಗೌರಿ ನಂದಿನಿ, ಭಕ್ತಿಗೀತೆ ಸ್ಪರ್ಧೆಯಲ್ಲಿ 3ನೇ ತರಗತಿಯ ಮಾಯಾಲಕ್ಷ್ಮಿ, ಚಿತ್ರಕಲೆಯಲ್ಲಿ 4ನೇ ತರಗತಿಯ ನಿಹಾರಿಕ, ಛದ್ಮವೇಷ ಸ್ಪರ್ಧೆಯಲ್ಲಿ 3ನೇ ತರಗತಿಯತನ್ವಿ, ದೇಶಭಕ್ತಿಗೀತೆಯಲ್ಲಿ 4ನೇ ತರಗತಿಯ ಶ್ರಾವಣಿದೀಪ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೀಷ್‌ ಕಂಠಪಾಠದಲ್ಲಿ 4ನೇ ತರಗತಿಯ ವಿಹಾನ್, ಕಥೆ ಹೇಳುವುದು4ನೇ ತರಗತಿಯ ಬ್ರಾಹ್ಮೀಕೃಪಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಧಾರ್ಮಿಕ ಪಠಣ ಸಂಸ್ಕೃತದಲ್ಲಿ 4ನೇ ತರಗತಿಯಶ್ರಾವಣಿ ದೀಪ ಹಾಗೂ ಅಭಿನಯಗೀತೆಯಲ್ಲಿ 4ನೇ ತರಗತಿಯ ಬ್ರಾಹ್ಮೀಕೃಪಾತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಹಿರಿಯ ವಿಭಾಗದಲ್ಲಿ ಇಂಗ್ಲೀಷ್‌ಕಂಠಪಾಠ ಸ್ಪರ್ಧೆಯಲ್ಲಿ೭ನೇ ತರಗತಿಯ ಚಿನ್ಮಯಿ ಎನ್. ಶೆಟ್ಟಿ, ಸಂಸ್ಕೃತಕಂಠಪಾಠದಲ್ಲಿ ೭ನೇ ತರಗತಿಯ ರಾಜೇಶ್ವರಿ ಭಟ್, ಧಾರ್ಮಿಕ ಪಠಣದಲ್ಲಿ೬ನೇ ತರಗತಿಯ ಅಪ್ರಮೇಯ ತೋಳ್ಪಾಡಿ, ದೇಶಭಕ್ತಿಗೀತೆಯಲ್ಲಿ ೭ನೇ ತರಗತಿಯ ಮಾನಸ, ಕಥೆ ಹೇಳುವುದು ೭ನೇ ತರಗತಿಯ ೭ನೇ ತರಗತಿಯ ಶಾನ್ವಿ ಜೆ.ಕೆಅಂಚನ್, ಚಿತ್ರಕಲೆಯಲ್ಲಿ ೭ನೇ ತರಗತಿಯನಿನಾದ್ ಕೈರಂಗಳ, ಭಕ್ತಿಗೀತೆ ೬ನೇ ತರಗತಿಯ ಅಪ್ರಮೇಯ ತೋಳ್ಪಾಡಿ, ಆಶುಭಾಷಣದಲ್ಲಿ ೭ನೇ ತರಗತಿಯ ಬಿನಿತ್ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಪ್ರಬಂಧರಚನೆಯಲ್ಲಿ ೭ನೇ ತರಗತಿಯ ಶಾರ್ವಿ ಪಿ.ಎಲ್ ದ್ವಿತೀಯ ಸ್ಥಾನ, ಅಭಿನಯ ಗೀತೆಯಲ್ಲಿ ೭ನೇ ತರಗತಿಯ ವೈಷ್ಣವಿ ವೈ.ಕೆ., ಮಿಮಿಕ್ರಿಯಲ್ಲಿ ೫ನೇ ತರಗತಿಯ ಅನರ್ಘ್ಯ ತೃತೀಯ ಸ್ಥಾನ ಪಡೆದಿರುತ್ತಾರೆ.

ಇವರಿಗೆ ಶ್ರೀರಾಮ ವಿದ್ಯಾಕೆಂದ್ರದ ಅಧ್ಯಕ್ಷರು, ಸಂಚಾಲಕರು, ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದದವರುಅಭಿನಂದನೆ ಸಲ್ಲಿಸಿದರು.