ಕಲ್ಲಡ್ಕ: ಶ್ರೀರಾಮ ಪ್ರೌಢ ಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕರ‍್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‌ಕಲ್ಲಡ್ಕ ಅವರು ದೀಪ ಪ್ರಜ್ವಲನ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು.

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕರ‍್ಯಕ್ರಮ

ನಂತರ ಮಾತಾನಾಡಿ ಸೋಲಿನಲ್ಲಿ ಗೆಲುವನ್ನುಕಾಣುವಾತ ನಿಜವಾದ ಕ್ರೀಡಾಪಟು, ಕ್ರೀಡಾಪಟುವಿನ ಗೆಲುವಿನ ದೃಷ್ಟಿಕೋನವು ತುಂಬಾ ಎತ್ತರದಲ್ಲಿರಬೇಕು ತಮ್ಮ ಕ್ರೀಡೆಯುದೇಶವನ್ನು ಪ್ರತಿನಿಧಿಸುವ ಮನೋಭಾವವನ್ನು ಹೊಂದಿರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಬಾಲವಿಕಾಸ ವಿದ್ಯಾಸಂಸ್ಥೆ ಮಾಣಿ ಇದರ ಅಧ್ಯಕ್ಷರಾದ ಶ್ರೀಪ್ರಹ್ಲಾದ ಶೆಟ್ಟಿ ಇವರು ಮಾತನಾಡುತ್ತಾ ಪ್ರತಿಯೊಬ್ಬ ಕ್ರೀಡಾಪಟುವಿನ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗುತ್ತದೆ. ಯಶಸ್ವಿ ಕ್ರೀಡಾಪಟು ವರ್ಷಪೂರ್ತಿ ಅಭ್ಯಾಸವನ್ನು ನಡೆಸಬೇಕು, ಪ್ರತಿಯೊಂದು ವಿದ್ಯಾರ್ಥಿಗೂಯಶಸ್ಸು ಲಭಿಸಲಿ ಎಂದು ಹೇಳಿದರು.

ವೇದಿಕೆಯಲ್ಲಿವಿದ್ಯಾಭಾರತಿದಕ್ಷಿಣಕನ್ನಡಜಿಲ್ಲೆಯಖೇಲ್‌ಕೂದ್ ಪ್ರಮುಖರಾದಶ್ರೀ ಕರುಣಾಕರ, ಸರಸ್ವತಿ ವಿದ್ಯಾಲಯಕಡಬಇದರ ಸಂಚಾಲಕರಾದ, ಶ್ರೀ ವೆಂಕಟರಮಣರಾವ್ ಮಂಕುಡೆ, ಶ್ರೀರಾಮವಿದ್ಯಾಕೇಂದ್ರದ ಸಹಸಂಚಾಲಕರಾಗಿರುವ ಶ್ರೀ ರಮೇಶ್‌ಎನ್, ಶ್ರೀರಾಮ ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಶ್ರೀ ವಸಂತ ಬಲ್ಲಾಳ್, ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ಗೋಪಾಲ್‌ಎಂ.ಉಪಸ್ಥಿತರಿದ್ದರು.

ದಿನಪೂರ್ತಿ ನಡೆದ ಪಂದ್ಯಾಟದಲ್ಲಿ ಜಿಲ್ಲೆಯ ಬಾಲ, ಕಿಶೋರ, ತರುಣ ವರ್ಗಗಳು ಸೇರಿದಂತೆ ಬಾಲಕ ಬಾಲಕಿಯರಒಟ್ಟು ೪೬ ತಂಡಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಶ್ರೀ ಜಿನ್ನಪ್ಪ ಶ್ರೀಮಾನ್ ನಿರೂಪಿಸಿ, ಗೋಪಾಲ್ ಶ್ರೀಮನ್ ಸ್ವಾಗತಿಸಿ, ಕುಮಾರಿ ದೀಕ್ಷಿತ ಮಾತಾಜಿ ವಂದಿಸಿದರು.