ಬಂಟ್ವಾಳ ತಾಲೂಕಿನ ಭಜನಾ ಪರಿಷತ್ ಸಭೆ ಹಾಗೂ 2024 -2027 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧ ಸಭಾಂಗಣದಲ್ಲಿ ನಡೆಯಿತು.

ಬಂಟ್ವಾಳ ತಾಲೂಕಿನ ಭಜನಾ ಪರಿಷತ್ತಿನ ಅಧ್ಯಕ್ಷರಾದ ದಿನೇಶ್ ಮಾಮೇಶ್ವರ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಗ್ರಾಮಾಭಿವೃದ್ಧಿಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ 1 ರ ನಿರ್ದೇಶಕರಾದ ಮಹಾಬಲ ಕುಲಾಲ್ ಇವರು ಉದ್ಘಾಟಿಸಿ ಭಜನೆಯ ಮಹತ್ವ ಮಂಡಳಿಯ ಚಟುವಟಿಕೆಗಳು ಹಾಗೂ ವಿಶೇಷ ಕಾರ್ಯಕ್ರಮಗಳಾದ ಕೃಷ್ಣ ಜನ್ಮಾಷ್ಟಮಿ , ಚೌತಿ ವರಮಹಾಲಕ್ಷ್ಮಿ ಪೂಜೆ ,ಸತ್ಯನಾರಾಯಣ ಪೂಜೆ, ಏಕಹ ಭಜನೆ, ನಗರ ಭಜನೆ , ಕಾರ್ಯಕ್ರಮಗಳ ಅನುಷ್ಠಾನ ,ಶ್ರೀ ಕ್ಷೇತ್ರದಲ್ಲಿ ನಡೆಯುವ ಭಜನಾ ಕಮ್ಮಟ, ಈ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕಿನ ಭಜನಾ ಪರಿಷತ್ತಿನ ಅಧ್ಯಕ್ಷರಾದ ದಿನೇಶ್ ಮಾಮೇಶ್ವರ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಈ ಸಂದರ್ಭ ಭಜನಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲೆಯ ಸಮನ್ವ್ಯಾಧಿಕಾರಿ ಸಂತೋಷ್ ಪಿ, ಕಾರ್ಯದರ್ಶಿ ಮುರಳಿಧರ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕಿನ ನೂತನ ಅಧ್ಯಕ್ಷರಾಗಿ ಮುರಳಿಧರ ಪೋಳಲಿ, ಉಪಾಧ್ಯಕ್ಷರಾಗಿ ರೋಹಿನಾಥ್ ಗೌಡ ಪೂಂಜಾಲ ಕಟ್ಟೆ, ಕಾರ್ಯದರ್ಶಿಯಾಗಿ ಕೃಷ್ಣಪ್ಪ ಸಪಲ್ಯ ನರಿಕೊಂಬು ಅಂತರ., ಜೊತೆ ಕಾರ್ಯದರ್ಶಿಯಾಗಿ ಶಶಿಕಲಾ ಕೊಯಿಲ, ಕೋಶಾಧಿಕಾರಿಯಾಗಿ ಸುರೇಶ್ ಮಿತ್ತ ತೋಟ ಅವನ್ನು ಆಯ್ಕೆಮಾಡಲಾಯಿತು.
ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಎಂ ಸ್ವಾಗತಿಸಿ, ಪಾಣೆ ಮಂಗಳೂರು ವಲಯದ ಮೇಲ್ವಿಚಾರಕರಾಕಿ ಅಮಿತಾ ವಂದಿಸಿ,ತುಂಬೆ ವಲಯದ ಮೇಲ್ವಿಚಾರಕರಾಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.