ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) ಬಂಟ್ವಾಳ ತಾಲೂಕು ಹಾಗೂ ಪ್ರಗತಿ ಬಂದು ಸ್ವ – ಸಹಾಯ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಜ್ಜಿಬೆಟ್ಟು, ಕೊರಗಟ್ಟೆ, ಇಲ್ಲಿ ಗಿಡ ನಾಟಿ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ಜರಗಿತು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಂದರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತಾಲೂಕು ಕೃಷಿ ಮೇಲ್ವಿಚಾರಕರಾದ ಜಯರಾಮರವರು ಪರಿಸರ ರಕ್ಷಣೆಯ ಅಗತ್ಯತೆಯನ್ನು ತಿಳಿಸಿ, ಪರಿಸರ ಜಾಗೃತಿ ನಮ್ಮೆಲ್ಲರ ಹೊಣೆ ಹಾಗೂ ಆದ್ಯ ಕರ್ತವ್ಯವಾಗಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ವೀಣಾ ಅವರು ಪರಿಸರದ ಕಾಳಜಿಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯ ಮೇಲ್ವಿಚಾರಕರಾಕಿ ಸವಿತಾ, ಚೆನ್ಹೆತೋಡಿ ಒಕ್ಕೂಟದ ಅಧ್ಯಕ್ಷೆ ಪುಷ್ಪ, ವಾಮದಪದವು ಶೌರ್ಯ ಕ್ಯಾಪ್ಟನ್ ಪ್ರಕಾಶ್, ಸೇವಾಪ್ರತಿನಿಧಿಗಳಾದ ಮೋಹನದಾಸ್, ರೇಖಾ,. ಉಪಸ್ಥಿತರಿದ್ದರು.
ಪರಿಸರದ ಬಗ್ಗೆ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತಾರಾನಾಥ್ ಸ್ವಾಗತಿಸಿ, ಶಾಲಾ ಶಿಕ್ಷಕ ರಾಜೇಶ್ ವಂದಿಸಿ, ಸೇವಾಪ್ರತಿನಿಧಿ ಮಾಧವ ಕಾರ್ಯಕ್ರಮ ನಿರೂಪಿಸಿದರು.