ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯಿಲ ಗ್ರಾಮದ ಅಂತರ ಬುರಾಲ್ ರಸ್ತೆಯಲ್ಲಿ ಗುಡ್ಡ ಕುಸಿದು ರಸ್ತೆ ಮುಚ್ಚಿ ಹೋಗಿರುವುದನ್ನು ತೆರವು ಕಾರ್ಯಾಚರಣೆ ನಡೆಸಲಾಯಿತು.

ಈ ಸಂದರ್ಭ ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂತೋಷ್ ರಾಯಿ ಬೆಟ್ಟು , ಸದಸ್ಯರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ, ರವೀಂದ್ರ ಬದಿನಡಿ, ನಾಗ ಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಬದಿನಡಿ ಮಾಜಿ ಅಧ್ಯಕ್ಷರಾದ ಸಂದೇಶ್ ಅಂತರ, ಪ್ರಗತಿಪರ ಕೃಷಿಕರಾದ ಆನಂದ ಬುರಾಲ್, ವಸಂತ್ ನಾಯ್ಕ ಬೈರಾಡಿ, ಮನೋಜ್ ಬೆರ್ಕೆ, ರಾಜೇಶ್ ಅಮ್ಮೆಲ, ಸ್ವಸ್ತಿಕ್ ಅಮ್ಮೆಳ, ಸಂತೋಷ ಅಂತರ ಹಾಗೂ ಅಚ್ಚುತ ಅಂತರ ಉಪಸ್ಥಿತರಿದ್ದರು.