ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಿಮ್ಯುಲೇಶನ್ ಲ್ಯಾಬ್‌ನಲ್ಲಿ ‘ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ’ಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲಾ ಪಾಲುದಾರರಿಗೆ ಮೂರು ದಿನಗಳ ‘ಸಿ.ಸಿ.ಎಲ್.ಎಸ್ ಮತ್ತು ಎಸ್.ಟಿ.ಎಲ್.ಎಸ್ ತರಬೇತಿ ಕಾರ್ಯಕ್ರಮ ನಡೆಯಿತು.

ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ‘ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಗೆ ಮಾನ್ಯತೆ ಪಡೆದ ಕೇಂದ್ರವಾಗಿ ಆಯ್ಕೆಯಾಗಿದೆ.

ಈ ಯೋಜನೆಯ ಯಶಸ್ವಿ ಅನುಷ್ಠಾನದ ಪೂರ್ವಭಾವಿ ಹಂತದ೦ತೆ, ವೈದ್ಯಕೀಯ ಅಧಿಕಾರಿಗಳು, ದಾದಿಯರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಗಳು ತರಬೇತಿಯಲ್ಲಿ ಪಾಲ್ಗೋಂಡರು.

ಕರ್ನಾಟಕ ಸರಕಾರ ಆರೋಗ್ಯ ಸೌಧ ಎನ್‌ಸಿಡಿ ವಿಂಗ್‌ ಉಪನಿರ್ದೇಶಕಿ ಡಾ. ಉಮಾ ಉಪಸ್ಥಿತರಿದ್ದರು.