ಬಂಟ್ವಾಳ ಫೆ. 18: ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆಡಳಿತದ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಶ್ರೀ ಗಣಪತಿ, ಶ್ರೀ ದುರ್ಗಾ ಸಾನಿಧ್ಯಗಳ ಪುನಃ ಪ್ರತಿಷ್ಠೆ ಸದಾಶಿವ ದೇವರಿಗೆ ಅಷ್ಟಬಂಧ ಬ್ರಹ್ಮಕಲಶ ಹಾಗೂ ಜಾತ್ರಾ ಮಹೋತ್ಸವ ಮಾ.3ರಿಂದ 12ರ ತನಕ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಬಿ. ರಘುನಾಥ ಸೋಮಯಾಜಿ ಎರಕಳ ಹೇಳಿದರು.
ಅವರು ಮಾ. 18 ರಂದು ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಬಹ್ಮಕಲಶ ಅಂಗವಾಗಿ ಮಾ.5ರಂದು ಸಂಜೆ 2.30ಕ್ಕೆ ನರಿಕೊಂಬು ದೊಂಪದ ಬಳಿ ನಾಲ್ಕೈತ್ತಾಯ ದೈವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಹೊರಡಲಿದೆ. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡುವರು.
ಮಾ.8ರಂದು ಬೆಳಗ್ಗೆ 9.06 ರಿಂದ 10.34 ರ ಶ್ರವಣ ನಕ್ಷತ್ರ ಮುಹೂರ್ತದಲ್ಲಿ ಅಷ್ಟಬಂಧ ಬ್ರಹ್ಮಕಲಶ ನಡೆಯಲಿದೆ ಎಂದರು.
ಎಲ್ಲಾ ದಿನಗಳಲ್ಲಿ ವಿವಿಧ ವೈದಿಕ ಧಾರ್ಮಿಕ, ಸಾಂಸ್ಕೃತಿಕ ವೈವಿಧ್ಯಗಳು, ಭಜನೆ, ಕಲಾವೈಭವ, ಗಾನ ನೃತ್ಯ ವೈಭವ, ನಾಟ್ಯ ಕಲಾ ವೈಭವ, ರಸಮಂಜರಿ, ತೆಲಿಕೆದ ಗೊಂಚಿಲ್, ನೃತ್ಯ ಭಜನೆ, ಯುಕ್ಷಗಾನ ಬಯಲಾಟ, ನಾಟಕ ಇತ್ಯಾದಿ
ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ನಿರಂತರ ಅನ್ನ ಸಂತರ್ಪಣೆ, ಉಪಹಾರ ವ್ಯವಸ್ಥೆ ಇರುವುದು.
ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವರಸ್ಥಾನದ ಸಹ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಾಲ್ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ನರಹರಿ ಪರ್ವತದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಪ್ರಶಾಂತ ಮಾರ್ಲ ಮಾತನಾಡಿ ದ.ಕ. ಜಿಲ್ಲೆ ದೇವಳಗಳ ತವರೂರು. ಇದು ದೇವಾಲಯಗಳ ಪ್ರವಾಸೋದ್ಯಮ ಕೇಂದ್ರವಾಗಬೇಕು. ನದಿ ದಂಡೆಯ ಮೇಲಿರುವ ದೇವಳದಲ್ಲಿ ಗಂಗಾರತಿ ನಡೆಸುವಂತಾಗಬೇಕು ಎಂದು ಪ್ರಸ್ತಾವನೆ ನೀಡಿದರು.
ನೆತ್ತರಕೆರೆ ನಾರಾಯಣ ಭಟ್, ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ರಮೇಶಾನಂದ ಸೋಮಯಾಜಿ ದೇವಳದ ಈ ಹುಂಡಿ ಯೋಜನೆ ಅನಾವರಣ ಮಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಪ್ರಧಾನ ಅರ್ಚಕ ನಾರಾಯಣ ಮಯ್ಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘು ಸಪಲ್ಯ ಸದಸ್ಯರಾದ ಕೃಷ್ಣಪ್ಪ ಗಾಣಿಗ, ಲೋಕೇಶ್ ನರಹರಿ ನಗರ, ಸಂಜೀವ ಸಪಲ್ಯ, ಕೋಶಾಧಿಕಾರಿ ಕೆ.ಶಂಕರನಾರಾಯಣ ಉಪಸ್ಥಿತರಿದ್ದರು
ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಪ್ರಸ್ತಾವನೆ ನೀಡಿದರು.
ಬ್ರಹ್ಮಕಲಶ ಸಮಿತಿ ಸಂಚಾಲಕ ಪ್ರಕಾಶ್ ಕಾರಂತ ಮಾತನಾಡಿ ಆಮಂತ್ರಣ ಪತ್ರಿಕೆಯನ್ನು ಪ್ರತಿ ಮನೆಗೆ ಮುಟ್ಟಿಸುವ ಕೆಲಸವನ್ನು ಹೊಣೆಗಾರಿಕೆಯಿಂದ ನಿರ್ವಹಿಸುವ , ಮನತುಂಬಿ ಕೆಲಸ ಮಾಡುವ ಎಂದರು.
ವೇದಿಕೆಯಲ್ಲಿ ಕಾರ್ಯದರ್ಶಿ ಪದ್ಮನಾಭ ಮಯ್ಯ ಏಲಬೆ, ಜಯಶಂಕರ ಬಾಸ್ರಿತ್ತಾಯ, ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಮತ, ಉದ್ಯಮಿ ನರಸಿಂಹ ಮಯ್ಯ, ಪ್ರಧಾನ ಅರ್ಚಕ ನಾರಾಯಣ ಮಯ್ಯ, ವಿಶ್ರಾಂತ ಶಿಕ್ಷಕ ಬಿ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ್ ಪ್ರಾರ್ಥನೆ ಮಾಡಿದರು.