– ಸಿಎಂ ಸೂಚನೆ ಮೇರೆಗೆ 33ನೇ ಕಂತಿನ ದುಡ್ಡು ರಿಲೀಸ್‌ಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್

ಬೆಂಗಳೂರು: ನವರಾತ್ರಿ ಹಬ್ಬಕ್ಕೆ ‘ಗೃಹಲಕ್ಷ್ಮಿ’ಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಹಬ್ಬಕ್ಕೆ ಫಲಾನುಭವಿಗಳ ಅಕೌಂಟ್‌ಗಳಿಗೆ ಹಣ ಜಮೆ ಆಗಲಿದೆ.

ಗೃಹಲಕ್ಷ್ಮಿ ಪರಿಷ್ಕರಣೆಯ ಕಸರತ್ತಿನ ಮಧ್ಯೆಯೂ ಸಿಎಂ ಸೂಚನೆ ಮೇರೆಗೆ 33ನೇ ಕಂತಿನ ದುಡ್ಡು ರಿಲೀಸ್‌ಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದನ್ನೂ ಓದಿ:ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ಈಗಾಗಲೇ ಗೃಹಲಕ್ಷ್ಮಿ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಪರಿಷ್ಕರಣೆ ವೇಳೆಯಲ್ಲೂ ದುಡ್ಡು ಜಮೆಗೆ ಸಿಎಂ ಸೂಚನೆ ನೀಡಿದ್ದಾರೆ. ಪರಿಷ್ಕರಣೆ ಸಂದರ್ಭದಲ್ಲಿ ಗೃಹಲಕ್ಷ್ಮಿ ದುಡ್ಡು ತಡೆಯೋದು ಬೇಡ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸೂಚನೆ ನೀಡಿದ್ದಾರೆ.