ಮಂಗಳೂರು: ದೇರಳಕಟ್ಟೆ ಯೆನೆಪೋಯ (ಪರಿಗಣಿತ ವಿಶ್ವವಿದ್ಯಾಲಯ) ಆವರಣದಲ್ಲಿ ಜೂನ್ 4, 2026 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ‘ಹಸಿರು ಮೇಳ: ಸಿರಿಧಾನ್ಯ ಮತ್ತು ಸಾವಯವ ಪ್ರದರ್ಶನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.  ಇದನ್ನೂ ಓದಿ : ವೀರಕಂಭ: ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ

ಯೆನೆಪೋಯ ನರ್ಸಿಂಗ್ ಕಾಲೇಜಿನ ಪರಿಸರ ಕ್ಲಬ್, ಸಂಸ್ಥೆಯ ನಾವೀನ್ಯತೆ ಸಮಿತಿ (IIC), ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗ ಹಾಗೂ ಪರಿಸರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಈ ವಿಶೇಷ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಎರಡು ಪ್ರಮುಖ ಸಾವಯವ ಆಹಾರ ಉತ್ಪನ್ನ ಸಂಸ್ಥೆಗಳು ಭಾಗವಹಿಸಿ, ವೈವಿಧ್ಯಮಯ ಸಿರಿಧಾನ್ಯಗಳನ್ನು ಪ್ರದರ್ಶಿಸಿದವು.

ಈ ಸಂದರ್ಭದಲ್ಲಿ ‘ನಿತ್ಯ ಪ್ರಾಡಕ್ಟ್ಸ್’ ಸಂಸ್ಥೆಯ ಮಾಲೀಕರಾದ ಶ್ರೀ ರಾಧಾಕೃಷ್ಣ ಅವರು ವಿವಿಧ ಬಗೆಯ ಸಿರಿಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರೆ, ‘ಗ್ರಾಮರಾಜ್ಯ ಪ್ರಾಡಕ್ಟ್ಸ್’ ಸಂಸ್ಥೆಯ ಮಾಲೀಕರಾದ ಶ್ರೀ ಸುದರ್ಶನ್ ಅವರು ಸಿರಿಧಾನ್ಯಗಳ ಬಳಕೆಯಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಡಾ. ನಿತ್ಯಶ್ರೀ ಮತ್ತು ಡಾ. ಬೆನಜೀರಾ ಅವರ ಯಶಸ್ವಿ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದಿಂದ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು.