ಮಂಗಳೂರು : ವಿಶ್ವ ಆರೋಗ್ಯ ದಿನ-2026ರ ಅಂಗವಾಗಿ, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯು, ಈ ವರ್ಷದ ವಿಷಯವಾದ ಆರೋಗ್ಯಕ್ಕಾಗಿ ಒಟ್ಟಾಗಿ-ವಿಜ್ಞಾನವನ್ನು ಬೆಂಬಲಿಸೋಣ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿತು. ಇದನ್ನೂ ಓದಿ : ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷ ರಾದ ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಬಂಟ್ವಾಳ ತಾಲೂಕಿನಾದ್ಯಂತ ಅಶಕ್ತರಿಗೆ ಹಣ್ಣು ಹಂಪಲು ವಿತರಣೆ

ಈ ಕಾರ್ಯಕ್ರಮವನ್ನು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಇ.ಎಮ್.ಡಿ ಸಭಾಂಗಣದಲ್ಲಿ ನಡೆಸಲಾಯಿತು. ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಾಮಾನ್ಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾದ್ಯಾಪಕರು ಮತ್ತು ಸೋಂಕು ರೋಗಗಳ ತಜ್ಞ ವೈದ್ಯರಾದ ಡಾ. ವಿ.ಕೆ.ವಿನೀತ್ ಅವರು “ನಾವು ಹೆಚ್ಚು ಬಳಸಿದಂತೆ ಹೆಚ್ಚು ಕಳೆದುಕೊಳ್ಳುತ್ತೇವೆ-ಆಂಟಿಮೈಕ್ರೋಬಿಯಲ್ಸ್ ಕುರಿತು ಐಡಿ ದೃಷ್ಟಿಕೋನ” ಎಂಬ ವಿಷಯದ ಮೇಲೆ ಆಂಟಿಬಯೋಟಿಕ್‌ಗಳ ಅತಿಯಾದ ಬಳಕೆ ಕುರಿತು ಜಾಗೃತಿ ಉಪನ್ಯಾಸ ನೀಡಿದರು. ಅವರು ಆಂಟಿಮೈಕ್ರೋಬಿಯಲ್ಸ್ ಪ್ರತಿರೋಧವು ಗಂಭೀರ ಜಾಗತಿಕ ಸಮಸ್ಯೆಯಾಗಿದ್ದು, ಅದರ ಪ್ರಮುಖ ಕಾರಣಗಳಲ್ಲಿ ಅಸಂಯಮಿತ ಆಂಟಿಮೈಕ್ರೋಬಿಯಲ್ಸ್ ಬಳಕೆಯು ಒಂದಾಗಿದೆ ಎಂದು ಒತ್ತಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವೈದ್ಯರು, ದಾದಿಯರು, ಫಾರ್ಮಾಸಿಸ್ಟ್ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ, ಆಸ್ಪತ್ರೆ ಆಡಳಿತ ಸದಸ್ಯರು, ಮಾರ್ಕೆಟಿಂಗ್ ತಂಡ ಮತ್ತು ಸಮಾಜ ಕಾರ್ಯ ವಿಭಾಗದ ಸದಸ್ಯರು ಭಾಗವಹಿಸಿದರು.
ಡಾ. ಹಬೀಬ್ ರಹಮಾನ್.ಎ.ಎ. ಮೆಡಿಕಲ್ ಸೂಪರಿಂಟೆAಡೆAಟ್ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಎಲ್ಲಾ ಆಡಳಿತಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು, ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಮಿಸ್. ನಿಲೀಷಾ ಮೆಲಿಟಾ ಕಾರ್ವಾಲೊ ಆಸ್ಪತ್ರೆಯ ಸಹಾಯಕ ಕಾರ್ಯಾಚರಣೆ ಅಧಿಕಾರಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ವಿಶ್ವ ಆರೋಗ್ಯ ದಿನದ ಅಂಗವಾಗಿ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯು, ಆಸ್ಪತ್ರೆಯ ಸಂದರ್ಶಕರಿಗೆ ಮತ್ತು ಸಾರ್ವಜನಿಕರಿಗಾಗಿ ರಕ್ತದ ಸಕ್ಕರೆ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ, ಎಲುಬಿನ ಖನಿಜ ಸಾಂದ್ರತೆ ಪರೀಕ್ಷೆ, ದೇಹದ ತೂಕ ಸೂಚ್ಯಂಕ ಮೌಲ್ಯಮಾಪನ ಹಾಗೂ ಆಹಾರ ಸಲಹೆಗಳನ್ನು ಉಚಿತವಾಗಿ ಒದಗಿಸಿತು. ಸುಮಾರು ೨೫೦ ಮಂದಿ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಉಚಿತ ತಪಾಸಣೆ ಮತ್ತು ಸಲಹೆಗಳ ಪ್ರಯೋಜನ ಪಡೆದುಕೊಂಡರು.