ದಾವಣಗೆರೆ ದಕ್ಷಿಣ ಉಪಚುನಾವಣೆಯ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ವತಿಯಿಂದ ದಾವಣಗೆರೆ ರೈಲ್ವೆ ಸ್ಟೇಷನ್ನಲ್ಲಿ ರಂಗೋಲಿ ಕಾರ್ಯಕ್ರಮ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಮಾನ್ಯ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳು, ಮಾನ್ಯ ಜಿಲ್ಲಾಧಿಕಾರಿಗಳು – ದಾವಣಗೆರೆ ಜಿಲ್ಲೆ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು – ಜಿಲ್ಲಾ ಪಂಚಾಯತ್ ದಾವಣಗೆರೆ. ಅಂಗನವಾಡಿ ಕಾರ್ಯಕರ್ತಿಯರು ಮತ್ತು ಮಹಿಳೆಯರು ಆಕರ್ಷಕ ರಂಗೋಲಿಗಳ ಮೂಲಕ ಮತದಾನದ ಮಹತ್ವವನ್ನು ಸಾರಿದರು.

ಉತ್ತಮ ರಂಗೋಲಿ ಬಿಡಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಮತಗಟ್ಟೆ ಮಾಹಿತಿ ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಮತ ಚಲಾಯಿಸಿ!

