– ಇರಾನ್ ಯುದ್ಧ ಶುರುವಾದ ಬಳಿಕ ರಾಜ್ಯಕ್ಕೆ ಬಂದ ಮೊದಲ ಹಡಗು
ಮಂಗಳೂರು: ನವಮಂಗಳೂರು ಬಂದರಿಗೆ (Mangaluru Port) 16,714 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ಖಾರ್ಗೋ ಹಡಗು ಆಗಮಿಸಿದೆ. ಇರಾನ್ ಹಾಗೂ ಇಸ್ರೇಲ್ ಯುದ್ಧ ಶುರುವಾದ ಬಳಿಕ ರಾಜ್ಯಕ್ಕೆ ಆಗಮಿಸಿದ ಮೊದಲ ಹಡಗು ಇದಾಗಿದೆ. ಇದನ್ನೂ ಓದಿ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದ ಕಾರ್ ಡ್ರಿಫ್ಟಿಂಗ್? – ಪೊಲೀಸರಿಂದ ಲ್ಯಾಂಬೊರ್ಗಿನಿ ಸೀಜ್
ಅಮೆರಿಕದ (America) ಟೆಕ್ಸಾಸ್ನಿಂದ 16,714 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ಪಿಕ್ಸಿಸ್ ಪಯನೀರ್ ಎಂಬ ಹಡಗು ಮಂಗಳೂರಿನ ನವಮಂಗಳೂರು ಬಂದರಿಗೆ ಆಗಮಿಸಿದೆ. ಏಜೀಸ್ ಕಂಪನಿಗೆ ಎಲ್ಪಿಜಿಯನ್ನು ಈ ಹಡಗು ತಂದಿದೆ.
ಮಾ.14 ರಂದು ಅಮೇರಿಕದಿಂದ ಪಿಕ್ಸಿಸ್ ಪಯಿನೀರ್ ಕಾರ್ಗೋ ಹಡಗು ಹೊರಟಿತ್ತು. ಇಂದು ಮಂಗಳೂರಿಗೆ ತಲುಪಿದ್ದು, ರಾಜ್ಯದಲ್ಲಿ ತಲೆದೂರಿರುವ ಸಿಲಿಂಡರ್ ಅಭಾವ ಪರಿಹಾರ ಆಗುವ ನಿರೀಕ್ಷೆ ಇದೆ.
