Home Delivery Death: ಮನೆಯಲ್ಲೇ 7ನೇ ಹೆರಿಗೆ, ತಾಯಿ ಸಾವು! ಅಕ್ಯುಪಂಕ್ಚರ್ ಚಿಕಿತ್ಸಕ ಪತಿ ವಿರುದ್ಧ ಕೇಸ್

Home Delivery Death: ಮನೆಯಲ್ಲೇ 7ನೇ ಹೆರಿಗೆ, ತಾಯಿ ಸಾವು! ಅಕ್ಯುಪಂಕ್ಚರ್ ಚಿಕಿತ್ಸಕ ಪತಿ ವಿರುದ್ಧ ಕೇಸ್

ತ್ರಿಶೂರ್: ಏಳನೇ ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆಯೊಬ್ಬರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ತ್ರಿಶೂರ್‌ನಲ್ಲಿ ನಡೆದಿದೆ. ಎಡಕ್ಕಾಳಿಯೂರ್ ನಿವಾಸಿ ಮುಹ್ಸಿನಾ (37) ಮೃತಪಟ್ಟವರು. ಅವರ ಸಾವಿನ ಬಗ್ಗೆ ಕುಟುಂಬಸ್ಥರು ಪತಿ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ : ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಸಾವು – ಗ್ರಾಮಸ್ಥರಿಂದ ಲಾಕಪ್‌ ಡೆತ್ ಆರೋಪ, ಠಾಣೆಗೆ ಬೀಗ ಜಡಿದು ಪ್ರತಿಭಟನೆ

ಕಳೆದ ಜನವರಿ 6 ರಂದು ಮುಹ್ಸಿನಾ ತಮ್ಮ ಏಳನೇ ಮಗುವಿಗೆ ಮನೆಯಲ್ಲೇ ಜನ್ಮ ನೀಡಿದ್ದರು. ಆದರೆ, ಹೆರಿಗೆಯಾದ ಮೂರನೇ ದಿನಕ್ಕೆ ಮಗು ಕೂಡ ಸಾವನ್ನಪ್ಪಿತ್ತು. ಮುಹ್ಸಿನಾ ಅವರ ಪತಿ ಇಬ್ರಾಹಿಂ, ವೃತ್ತಿಯಲ್ಲಿ ಅಕ್ಯುಪಂಕ್ಚರ್ ಚಿಕಿತ್ಸಕ. ಈ ಘಟನೆ ಸಂಬಂಧ ಚಾವಕ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಟುಂಬಸ್ಥರ ಪ್ರಕಾರ, ಮುಹ್ಸಿನಾ ಅವರ ಮೊದಲ ಆರು ಹೆರಿಗೆಗಳು ಆಸ್ಪತ್ರೆಯಲ್ಲೇ ಆಗಿದ್ದವು. ಆದರೆ, ಆ ಬಳಿಕ ಮಕ್ಕಳಿಗೆ ಯಾವುದೇ ಹೆಚ್ಚಿನ ಚಿಕಿತ್ಸೆ ಅಥವಾ ಲಸಿಕೆಗಳನ್ನು ಕೊಡಿಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ದಂಪತಿಯ ಇಬ್ಬರು ಮಕ್ಕಳು ಈ ಹಿಂದೆಯೂ ಮೃತಪಟ್ಟಿದ್ದರು. ಏಳನೇ ಹೆರಿಗೆಯನ್ನು ಮಾತ್ರ ಮನೆಯಲ್ಲಿ ಮಾಡಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.  ಇದನ್ನೂ ಓದಿ : World Otter Day ಮೇ 27 ವಿಶ್ವ ನೀರುನಾಯಿ ದಿನ

About The Author

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Leave a reply

Your email address will not be published. Required fields are marked *

ಇತ್ತೀಚಿನ ವರದಿಗಳು

error: Content is protected !!