ನವದೆಹಲಿ: ಯುಎಇಯಿಂದ (UAE) ಹೊರಟಿರುವ 81 ಸಾವಿರ ಟನ್ ಕಚ್ಚಾ ತೈಲ(Crude oil) ನಾಳೆ ಭಾರತಕ್ಕೆ (India) ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಯುಎಇಯಿಂದ ಭಾರತೀಯ ಧ್ವಜ ಹೊತ್ತ ಹಡಗು ಭಾರತಕ್ಕೆ ಬರುವ ಮಾರ್ಗದಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ : ಗಂಡನನ್ನು ಅರೆಸ್ಟ್ ಮಾಡಿ ಹೆಂಡತಿನ ಮಂಚಕ್ಕೆ ಕರಿತಿದ್ದ ಇನ್ಸ್ಪೆಕ್ಟರ್ – ನೊಂದ ಮಹಿಳೆಯಿಂದ ಸಿಎಂಗೆ ದೂರು
ಎಲ್ಪಿಜಿಯನ್ನು ಹೊತ್ತುಕೊಂಡು ಪರ್ಷಿಯನ್ ಕೊಲ್ಲಿಯಿಂದ ಹೊರಟು ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟಿ ಭಾರತಕ್ಕೆ ಆಗಮಿಸಿದ ಶಿವಾಲಿಕ್ (Shivalik) ಹಡಗಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಡಗಿನಿಂದ ಸರಕು ಸಾಗಣೆಯಲ್ಲಿ ಯಾವುದೇ ವಿಳಂಬವಾಗದಂತೆ ಬಂದರಿನಲ್ಲಿ ದಾಖಲೆಗಳು, ಆದ್ಯತೆಯ ಬರ್ತಿಂಗ್ ಮತ್ತು ಎಲ್ಲವನ್ನೂ ವ್ಯವಸ್ಥೆ ಮಾಡಲಾಗಿದೆ ಎಂದರು.
