ಬಂಟ್ವಾಳ: ಶ್ರೀಮಂತರು ಬಡವರನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟವ್ಯವಸ್ಥೆಯೇ ಜೀತಪದ್ಧತಿಯಾಗಿದೆ. ಧನಿಕರು ಬಡವರಿಗೆ ಹಣ ಹಾಗೂ ಇನ್ನಿತರೆ ರೂಪದಲ್ಲಿ ಕೊಟ್ಟಂತಹದ್ದನ್ನು ಅಧಿಕ ಬಡ್ಡಿರೂಪದಲ್ಲಿ ಹೆಚ್ಚಿಸಿ ಅವರನ್ನು ಅಮಾನುಷವಾಗಿ ದುಡಿಸಿಕೊಳ್ಳುವ ಅನಿಷ್ಟಪದ್ಧತಿಯಾಗಿದೆ ಎಂದು ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮಂಚಿ ನುಡಿದರು. ಇದನ್ನೂ ಓದಿ : 2ನೇ ಮದುವೆಗೆ ರೆಡಿ ಆಗಿದ್ದ ವರನಿಗೆ ಶಾಕ್ – ಮದುಮಗಳಿಂದಲೇ ದಾಖಲಾಯ್ತು ದೂರು
ಅವರು ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ನಡೆದ ‘ಜೀತಪದ್ಧತಿ ರದ್ಧತಿ ಪ್ರತಿಜ್ಞಾ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸುಯೋಗವರ್ಧನ್ ಡಿ.ಎಮ್. ಜೀತಪದ್ಧತಿ ರದ್ಧತಿ ಪ್ರತಿಜ್ಞಾವಿಧಿ ಬೋಧಿಸಿದರು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತ್ರಿ ಹೆಚ್.ವಿ. ನಿರೂಪಿಸಿ, ಸ್ವಾಗತಿಸಿದರು. ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸಹನಾ ವಂದಿಸಿದರು.