2026ನೇ ಸಾಲಿನ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಎನ್.ಸಿ.ಸಿ. ಕೆಡೆಟ್ ಗಳಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅಭಿನಂದಿಸಿ, ಶುಭ ಹಾರೈಸಿದರು.
ಸಮಾರಂಭದಲ್ಲಿ ಸಚಿವರಾದ ಎಂ.ಸಿ.ಸುಧಾಕರ್, ಎಂ.ಬಿ.ಪಾಟೀಲ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಕೆ.ಜಿ.ಜಗದೀಶ್, ಕರ್ನಾಟಕ ಮತ್ತು ಗೋವಾ ಡೆಪ್ಯುಟಿ ಡೈರೆಕ್ಟರ್ ಜನರಲ್ ವಿಂಗ್ ಕಮಾಂಡರ್ ಎಸ್.ಬಿ.ಅರುಣ್ಕುಮಾರ್, ಎನ್.ಸಿ.ಸಿ ಗ್ರೂಪ್ ಕಮಾಂಡರ್ ಎಸ್.ಎಸ್.ಕಾಳಿಯಾ, ಪಿ.ಆರ್.ಪೊನ್ನಪ್ಪ ಸೇರಿದಂತೆ ಎನ್.ಸಿ.ಸಿ ಯ ಹಿರಿಯ ಅಧಿಕಾರಿಗಳು, ಎನ್.ಸಿ.ಸಿ ಕೆಡೆಟ್ಗಳು ಉಪಸ್ಥಿತರಿದ್ದರು.