ಶ್ರೀ ವೆಂಕಟರಮಣಸ್ವಾಮೀ ಕಾಲೇಜು, ಬಂಟ್ವಾಳ : ಎನ್.ಎಸ್.ಎಸ್. ಶಿಬಿರ ಸಮಾರೋಪ
ಬಂಟ್ವಾಳ: ಯುವ ಸಮುದಾಯ ಸಮಾಜದಲ್ಲಿ ಮುಂಚೂಣಿಗೆ ಬಂದರೆ ದೇಶದ ಪ್ರಗತಿಗೆ ವೇಗಸಿಗುತ್ತದೆ. ಇಂದಿನ ವಿದ್ಯಾರ್ಥಿಗಳು ಎನ್.ಎಸ್.ಎಸ್. ರೀತಿಯ ಸಮಾಜಮುಖಿ ಶಿಬಿರಗಳಲ್ಲಿ ಭಾಗವಹಿಸುವುದರ ಮೂಲಕ ಸಾಮಾಜಿಕ ಜವಾಬ್ದಾರಿಗಳನ್ನು ತಿಳಿಯಬೇಕು ಎಂದು ಬಂಟ್ವಾಳದ ಶ್ರೀ ವೆಂಕಟರಮಣಸ್ವಾಮೀ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮಂಚಿ ನುಡಿದರು.
ಅವರು ಮಂಚಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಎಸ್.ವಿ.ಎಸ್. ಕಾಲೇಜಿನ ಎನ್.ಎಸ್.ಎಸ್.ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ :  ಪಾಟ್ನಾ ಪಕ್ಷಿಧಾಮ ಮತ್ತು ಛಾರಿ-ಧಂಡ್ ನಲ್ಲಿ ಹೊಸ ರಾಮ್ಸರ್ ತಾಣಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿ
 
ಎನ್.ಎಸ್.ಎಸ್. ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಸಹಕಾರ ಮನೋಭಾವನೆಯು ಬೆಳೆಯುತ್ತದೆ ಅದನ್ನು ಮುಂದೆಯೂ ವಿದ್ಯಾರ್ಥಿಗಳು ಅನುಸರಿಸಿಕೊಂಡಲ್ಲಿ ಸಾಮಾಜಿಕ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಮಂಚಿ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಿವಶಂಕರ್ ರಾವ್ ಮಾತನಾಡಿದರು.
ಶಿಬಿರಗಳು ಪಠ್ಯದೊಂದಿಗೆ ಜೀವನಪಾಠ ಕಲಿಸುವ ಕಾರ್ಯಾಗಾರಗಳು ಇದರ ಸದುಪಯೋಗವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕೆಂದು ಸಾಲೆತ್ತೂರು ಗ್ರಾಮದ ಉದ್ಯಮಿಗಳಾದ ಮಾಧವ ಮಾವೆ ನುಡಿದರು.
ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆöÊರ್ಯ ಹೆಚ್ಚುತ್ತದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣ ಜೀವನ ಶೈಲಿಯನ್ನು ತಿಳಿಯಬೇಕು ಎಂದು  ಮಂಚಿ-ಕುಕ್ಕಾಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಕೇಶವರಾವ್ ನೂಜಿಪ್ಪಾಡಿ ತಿಳಿಸಿದರು.
ಗ್ರಾಮೀಣ ಪ್ರದೇಶಗಳು ದೇಶದ ಜೀವನಾಡಿ ಇಲ್ಲಿಯ ಜೀವನಶೈಲಿಯನ್ನು ಅಧ್ಯಯನ ಮಾಡುವುದರೊಂದಿಗೆ ಸೇವಾಮನೋಭಾವ ಬೆಳೆಸಿಕೊಳ್ಳಬೇಕೆಂದು ಮಂಚಿ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಸದಸ್ಯರಾದ ಶ್ರೀ ರಮೇಶ್ ರಾವ್ ಪತ್ತುಮುಡಿ ಹೇಳಿದರು.
ಮಂಚಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಸುಶೀಲ ಮಾತನಾಡಿ ಈ ರೀತಿಯ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವವು ಉಂಟಾಗುತ್ತದೆ. ಭವಿಷ್ಯದಲ್ಲಿ ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ವೇದಿಕೆಯಲ್ಲಿ ಎನ್.ಎಸ್.ಎಸ್. ನಾಯಕರಾದ ಕು.ಅಮಿತ್ ಪ್ರಭು ಹಾಗೂ ಕು.ಕರಿಷ್ಮಾ ಉಪಸ್ಥಿತರಿದ್ದರು. ಶಾಲೆಯ ನೋಡಲ್ ಅಧಿಕಾರಿ ಶ್ರೀ ತಾರಾನಾಥ ಕೈರಂಗಳ ಭಾಗವಹಿಸಿದ್ದರು.
ಪ್ರಾಧ್ಯಾಪಕರಾದ ಕು.ಅರ್ಚನಾ ಸ್ವಾಗತಿಸಿ, ಕು.ದೀಕ್ಷಾ ನಿರೂಪಿಸಿದರು. ಶ್ರೀಮತಿ ಧನುಶ್ರೀ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ಕು.ಪ್ರಾಜ್ಞವಿ ತಂಡದವರು ಪ್ರಾರ್ಥಿಸಿ, ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥಶಾಸ್ತಿç ವಂದಿಸಿದರು.