ಶಾಲೆಯು ಅಭಿವೃದ್ಧಿ ಹೊಂದುವಲ್ಲಿ ಸಮುದಾಯದ ಪಾತ್ರ ಅತ್ಯಮೂಲ್ಯವಾಗಿದ್ದು – ಸುಧಾಕರ್ ಭಟ್
ಕಲ್ಲಡ್ಕ : ಶಾಲೆಯು ಅಭಿವೃದ್ಧಿ ಹೊಂದುವಲ್ಲಿ ಸಮುದಾಯದ ಪಾತ್ರ ಅತ್ಯಮೂಲ್ಯವಾಗಿದ್ದು, ಏಮಾಜೆ ಶಾಲೆಯ ಯಶಸ್ಸಿನ ಪಥದಲ್ಲಿ ಸಹಕರಿಸುತ್ತಿರುವ ಪ್ರತಿಯೊಬ್ಬರ ಶ್ರಮವು ಶ್ಲಾಘನೀಯವಾದದ್ದು ಎಂದು ಮಾಣಿ ಕ್ಲಸ್ಟರ್ ಸಿ. ಆರ್. ಪಿ ಸುಧಾಕರ್ ಭಟ್ ಹೇಳಿದರು. ಇದನ್ನೂ ಓದಿ : ಬೋಳಂಗಡಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಬಂಟ್ವಾಳ ನಗರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ
ಅವರು ಡಿಸೆಂಬರ್ 30 ನೇ ಮಂಗಳವಾರ ಬಂಟ್ವಾಳ ತಾಲೂಕು ನೆಟ್ಲ ಮೂಡ್ನೂರು ಗ್ರಾಮದ ದ. ಕ. ಜಿ. ಪಂ. ಕಿ. ಪ್ರಾ. ಶಾಲೆ ಏಮಾಜೆಯಲ್ಲಿ ನಡೆದ “ಪ್ರತಿಭಾ ಸಂಭ್ರಮ” ಹಾಗೂ “ಅಕ್ಷರ ರತ್ನ” ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು..
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಗಣೇಶ್ ಆಚಾರ್ಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ವೇಳೆ ಶಾಲಾವತಿಯಿಂದ ಕಳೆದ ಶೈಕ್ಷಣಿಕ ವರ್ಷದಿಂದ ಕೊಡ ಮಾಡುತ್ತಿರುವ “ಅಕ್ಷರ ರತ್ನ” ಪುರಸ್ಕಾರವನ್ನು ಎಸ್. ಡಿ. ಎಂ ಸಿ ಸಮಿತಿಯ ನಿಕಟ ಪೂರ್ವ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಆಚಾರ್ಯ ಅವರಿಗೆ ಪ್ರದಾನ ಮಾಡಲಾಯಿತು.
ಪ್ರತಿಭಾ ಕಾರಂಜಿ ಹಾಗೂ ಕರಾಟೆ ಸ್ಪರ್ಧೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವರ್ಷ ಹಾಗೂ ಶ್ಲೋಕ್ ರೈ ಬಿ, ಶಾಲಾಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಹಳೆ ವಿದ್ಯಾರ್ಥಿ ಶ್ರೀ ಹರೀಶ್ ಪೂಜಾರಿ ಮೆಕ್ಸಿಕೋ ಹಾಗೂ ನಾಗೇಶ್ ಪೂಜಾರಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಲಿಕೆ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಪೋಷಕರಿಗೆ ನಡೆಸಿದ ವಿಶೇಷ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು
ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಮಿತ ಡಿ ಪೂಜಾರಿ, ಸದಸ್ಯರಾದ ಶಕೀಲಾ ಕೃಷ್ಣ ಮಿತ್ತಕೋಡಿ, ಧನಂಜಯ ಗೌಡ, ನಿವೃತ್ತ ಪ್ರಾಂಶುಪಾಲರಾದ ಶ್ರೀ ಜಯರಾಮ್ ರೈ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಹರೀಶ್ ಕುಲಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿ, ಸಹ ಶಿಕ್ಷಕ ಉದಯ ಚಂದ್ರ ಕೆ ಎಸ್ ಶಾಲಾ ವರದಿ ವಾಚಿಸಿ, ಗೌರವ ಶಿಕ್ಷಕಿ ಶ್ರೀಮತಿ ಐಸಮ್ಮ ಬಹುಮಾನಿತರ ಪಟ್ಟಿ ವಾಚಿಸಿ, ಶಿಕ್ಷಕಿ ದೀಕ್ಷಾ ವಂದಿಸಿದರು. ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
