ಭಾರತದ ನೆಲದಿಂದ ಉಡಾವಣೆ ಮಾಡಲಾದ ಇದುವರೆಗಿನ ಅತ್ಯಂತ ಭಾರದ ಉಪಗ್ರಹವಾದ ಅಮೆರಿಕದ ʻಬ್ಲೂಬರ್ಡ್ ಬ್ಲಾಕ್-2ʼ ಅನ್ನು ‘ಎಲ್ವಿಎಂ3-ಎಂ6’ ಉಡ್ಡಯನ ವಾಹನದ ಮೂಲಕ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾದ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಇದು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಹೆಮ್ಮೆಯ ಮೈಲುಗಲ್ಲಾಗಿದೆ ಮತ್ತು ʻಆತ್ಮನಿರ್ಭರ ಭಾರತʼದತ್ತ ನಡೆಯುತ್ತಿರುವ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಇದನ್ನೂ ಓದಿ : ದಟ್ಟ ಮಂಜಿನಿಂದ ಹೆಚ್ಚಿದ ಅಪಘಾತ – 23 ದಿನದಲ್ಲಿ 75 ಆಕ್ಸಿಡೆಂಟ್, 33 ಮಂದಿ ಸಾವು
“ಎಲ್ವಿಎಂ3 ಉಡ್ಡಯನ ವಾಹನವು ವಿಶ್ವಾಸಾರ್ಹ ಹೆವಿ-ಲಿಫ್ಟ್ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದರೊಂದಿಗೆ, ನಾವು ಗಗನಯಾನದಂತಹ ಭವಿಷ್ಯದ ಕಾರ್ಯಾಚರಣೆಗಳಿಗೆ ಅಡಿಪಾಯವನ್ನು ಬಲಪಡಿಸುತ್ತಿದ್ದೇವೆ, ವಾಣಿಜ್ಯ ಉಡಾವಣಾ ಸೇವೆಗಳನ್ನು ವಿಸ್ತರಿಸುತ್ತಿದ್ದೇವೆ ಮತ್ತು ಜಾಗತಿಕ ಪಾಲುದಾರಿಕೆಯನ್ನು ಆಳಗೊಳಿಸುತ್ತಿದ್ದೇವೆ,” ಎಂದು ಶ್ರೀ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಈ ಕುರಿತು ʻಎಕ್ಸ್ʼ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ದಾಪುಗಾಲು…
‘ಎಲ್ವಿಎಂ3-ಎಂ6’ ಯಶಸ್ವಿ ಉಡ್ಡಯನದ ಮೂಲಕ ಭಾರತದ ನೆಲದಿಂದ ಉಡಾವಣೆ ಮಾಡಲಾದ ಇದುವರೆಗಿನ ಅತ್ಯಂತ ಭಾರದ ಉಪಗ್ರಹವಾದ ಅಮೆರಿಕದ ʻಬ್ಲೂಬರ್ಡ್ ಬ್ಲಾಕ್-2ʼ ಅನ್ನು ನಿರೀಕ್ಷಿತ ಕಕ್ಷೆಗೆ ಸೇರಿಸಿರುವುದು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಮಹತ್ವದ ಮೈಲುಗಲ್ಲನ್ನು ಸೂಚಿಸುತ್ತದೆ.”
ಇದು ಭಾರತದ ಹೆವಿ-ಲಿಫ್ಟ್ ಉಡಾವಣಾ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ವಾಣಿಜ್ಯ ಉಡಾವಣಾ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ನಮ್ಮ ಪಾತ್ರವನ್ನು ಬಲಪಡಿಸುತ್ತದೆ.
ಇದು ಆತ್ಮನಿರ್ಭರ ಭಾರತದತ್ತ ನಮ್ಮ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ನಮ್ಮ ಕಠಿಣ ಪರಿಶ್ರಮಿಗಳಾದ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳಿಗೆ ಅಭಿನಂದನೆಗಳು.
ಭಾರತವು ಬಾಹ್ಯಾಕಾಶ ಜಗತ್ತಿನಲ್ಲಿ ಎತ್ತರೆತ್ತರಕ್ಕೆ ಏರುತ್ತಿದೆ!”
@isro
“ಭಾರತದ ಯುವಜನರ ಶಕ್ತಿಯಿಂದಾಗಿ, ನಮ್ಮ ಬಾಹ್ಯಾಕಾಶ ಕಾರ್ಯಕ್ರಮವು ಹೆಚ್ಚು ಸುಧಾರಿತ ಮತ್ತು ಪ್ರಭಾವಶಾಲಿಯಾಗುತ್ತಿದೆ.
ʻಎಲ್ವಿಎಂ3ʼ ಉಡ್ಡಯನವು ವಿಶ್ವಾಸಾರ್ಹ ಹೆವಿ-ಲಿಫ್ಟ್ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದರೊಂದಿಗೆ, ನಾವು ಗಗನಯಾನದಂತಹ ಭವಿಷ್ಯದ ಕಾರ್ಯಾಚರಣೆಗಳಿಗೆ ಅಡಿಪಾಯವನ್ನು ಬಲಪಡಿಸುತ್ತಿದ್ದೇವೆ, ವಾಣಿಜ್ಯ ಉಡಾವಣಾ ಸೇವೆಗಳನ್ನು ವಿಸ್ತರಿಸುತ್ತಿದ್ದೇವೆ ಮತ್ತು ಜಾಗತಿಕ ಪಾಲುದಾರಿಕೆಯನ್ನು ಆಳಗೊಳಿಸುತ್ತಿದ್ದೇವೆ.
ಈ ವರ್ಧಿತ ಸಾಮರ್ಥ್ಯ ಮತ್ತು ಸ್ವಾವಲಂಬನೆಗೆ ಉತ್ತೇಜನವು ಮುಂದಿನ ಪೀಳಿಗೆಯ ಪಾಲಿಗೆ ಅದ್ಭುತವಾಗಿವೆ.”
@isro
