ಬ್ರಹ್ಮಗಂಟು’ ಕನ್ನಡ ಧಾರಾವಾಹಿಯಲ್ಲಿ ನಟಿಸಿ ಭಾರೀ ಖ್ಯಾತಿ ಗಳಿಸಿದಂತಹ ನಟಿ ಗೀತಾ ಭಾರತಿ ಭಟ್ (Geetha Bharathi Bhat) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಒಳ್ಳೆ ಗಾಯಕಿ ಸಹ ಆಗಿರುವ ಗೀತಾ ಬಿಗ್‌ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಆ ನಂತರ ಅವರು ಸೋಷಿಯಲ್ ಮಿಡಿಯಾದ್ಯಂತ ಫೇಮಸ್ ಆಗಿದ್ದಷ್ಟೇ ಅಲ್ಲದೆ ಆ್ಯಕ್ಟಿವ್ ಕೂಡಾ ಆಗಿದ್ದರು. ವರ್ಕೌಟ್, ಫಿಟ್ನೆಸ್ ಸಂಬಂಧ ಸುದ್ದಿಯಾದ ನಟಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಅಮೃತಧಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದು ಸದ್ಯ ಅವರ ಮದುವೆ ಫೋಟೋಸ್ ಕಾಣಿಸಿಕೊಂಡಿವೆ.

ಗೀತಾ ಭಾರತಿ ಭಟ್ ಅವರ ಮದುವೆ ಫೋಟೋಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಜೀವನದಲ್ಲಿ ಅನೇಕ ಬಾರಿ ಬಾಡಿ ಶೇಮಿಂಗ್ ಅನುಭವಿಸಿ ಗೀತಾ ಅವರು ಈ ವಿಚಾರದ ಬಗ್ಗೆ ಹಲವು ಬಾರಿ ಮಾತನಾಡಿದ್ದರು.