ಬಿ.ಆರ್.ಎಂ.ಪಿ.ಸಿ. ಪಬ್ಲಿಕ್ ಸ್ಕೂಲ್, ವಿದ್ಯಾಗಿರಿ, ಬಂಟ್ವಾಳ : ಶಾಲಾ ವಾರ್ಷಿಕೋತ್ಸವ
ಬಂಟ್ವಾಳ : ಬಾಳಿನಲ್ಲಿ ಬರುವ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳು ಅದನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಮಂಗಳೂರಿನ ಎನ್.ಸಿ.ಸಿ. ಕಮಾಂಡಿಂಗ್ ಆಫೀಸರ್ ಲೆ| ಕರ್ನಲ್ ರೋಹಿತ್ ಪ್ರಕಾಶ್ ರೈ ಹೇಳಿದರು. ಇದನ್ನೂ ಓದಿ :ಪ್ರತಿಭಾ ಕಾರಂಜಿಯಲ್ಲಿ ಪಾತಿಮಾ ಜಿಲ್ಲಾಮಟ್ಟಕ್ಕೆ ಆಯ್ಕೆ
ಅವರು ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ನ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಸ್.ವಿ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶ್ರೀಮತಿ ಕೆ ರೇಖಾ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಶ್ರೀಮತಿ ಪೂರ್ಣೇಶ್ವರಿ ಭಟ್ ಕೆ ಅವರು ಶಾಲಾ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ಶಾಲಾ ಸಂಯೋಜನಾಧಿಕಾರಿಯಾದ ಶ್ರೀಮತಿ ಜೂಲಿಯಾನ ಡಿ’ಸೋಜ ಉಪಸ್ಥಿತರಿದ್ದರು. ಶ್ರೀ ಮನೋಹರ ಎಸ್ ದೊಡ್ಡಮನಿ ಸ್ವಾಗತಿಸಿ, ಶ್ರೀಮತಿ ಶುಭಲತಾ ವಂದಿಸಿದರು. ಅನನ್ಯ ಮತ್ತು ಸಂಗಡಿಗರು ಪ್ರಾರ್ಥಿಸಿ, ವಿವಾನ್ ಮೆಲ್ರಿಕ್ ಮೆನೆಜಸ್ ಹಾಗೂ ಧೃತಿ ಎಚ್ ನಿರೂಪಿಸಿದರು. ಶ್ರೀಮತಿ ಅನಿತಾ ಡಿ’ಸೋಜ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ದಿವ್ಯ ಮತ್ತು ಶ್ರೀಮತಿ ಮರಿಯಾ ರೊಲಿಟಾ ಡಿ’ಸೋಜ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.
ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
