ಕಲ್ಲಡ್ಕ : ನಾಗರಾಜ್ ಕಲ್ಲಡ್ಕ ನೇತೃತ್ವದ ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ವತಿಯಿಂದ ಹೋಟೆಲ್ ಲಕ್ಷ್ಮಿ ಗಣೇಶ್ ಕಲ್ಲಡ್ಕದ ಸಹಕಾರದೊಂದಿಗೆ ಯಶಸ್ವಿ ಏಳನೇ ವರ್ಷದ ಕಲ್ಲಡ್ಕದ ಪಿಲಿ -2025 ಸಾಂಪ್ರದಾಯಿಕ ದಸರಾ ಹುಲಿಗಳ ಊದು ಪೂಜೆ ಕಾರ್ಯಕ್ರಮ ದಿನಾಂಕ 30-9-2025 ನೇ ಮಂಗಳವಾರ ಸಾಯಂಕಾಲ ಗಂಟೆ 5 ರಿಂದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದ ರಾಮಾಂಗಣದಲ್ಲಿ ಜರಗಲಿರುವುದು. ಇದನ್ನೂ ಓದಿ : ಮಲಯಾಳಂ ನಟ ಮೋಹನ್ಲಾಲ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ
ಕಲ್ಲಡ್ಕ ಲಕ್ಷ್ಮಿ ಗಣೇಶ್ ಕೆ ಟಿ ಹೋಟೆಲ್ ಮಾಲಕರಾದ ಎನ್ ರಾಜೇಂದ್ರ ಹೊಳ್ಳ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು
ಈ ಸಂದರ್ಭದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ ಭಟ್ ರವರ ಉಪಸ್ಥಿತಿಯಲ್ಲಿ ನಿತ್ಯರಕ್ಷಾ ಆಂಬುಲೆನ್ಸ್ ಸೇವಾರ್ಪಣೆ ನಡೆಯಲಿದ್ದು, ಹಾಗೂ ಸಮಾಜದ ವಿವಿಧ ಗಣ್ಯರಿಗೆ ಗೌರವ ಅರ್ಪಣೆ ಕಾರ್ಯಕ್ರಮ ಜರಗಲಿರುವುದು.
ಸಂಜೆ ಗಂಟೆ 5:30ಕ್ಕೆ ಸರಿಯಾಗಿ ಕಲಾಮಯಂ ಉಡುಪಿ ಅವರಿಂದ ಜಾನಪದ ಕಲರವ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮ, ವೈವಾಹಿಕ ಜೀವನದಲ್ಲಿ ಮೂರು ದಶಕ ಪೂರ್ಣಗೊಳಿಸಿದ ದಂಪತಿಗಳ ಸಂಗಮ “ನಿತ್ಯದಂಪತಿ” ಕಾರ್ಯಕ್ರಮ, 1ರಿಂದ 9 ವರ್ಷ ದ ಮಕ್ಕಳಿಗೆ “ಬಾಲಭೋಜನ” ಕಾರ್ಯಕ್ರಮ ಜರಗಲಿರುವುದು. ಎಂದು ನಾಗ ಸುಜ್ಞಾನ ಫ್ರೆಂಡ್ಸ್ ನ ಮುಖ್ಯಸ್ಥರಾದ ನಾಗರಾಜ್ ಕಲ್ಲಡ್ಕ ತಿಳಿಸಿರುತ್ತಾರೆ.
