ಕಲ್ಲಡ್ಕ : ವೀರಕಂಭ ಗ್ರಾಮ ಸ್ನೇಹ ಸಂಜೀವಿನಿ ಒಕ್ಕೂಟದ ಮಹಾಸಭೆ ಹಾಗೂ ಆಟಿಡೊಂಜಿ ಕೂಟ ಕಾರ್ಯಕ್ರಮ ಕಾರ್ಯಕ್ರಮ ವೀರಕಂಭ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸ್ನೇಹ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಕುಸುಮ ರವರ ಅಧ್ಯಕ್ಷತೆಯಲ್ಲಿ ಬುಧವಾರ ಜರಗಿತು. ಇದನ್ನೂ ಓದಿ : ಸ್ವಾತಂತ್ರ್ಯೋತ್ಸವ ನಿಮಿತ್ತ ಕೆಲಿಂಜ ಸರಕಾರಿ ಶಾಲೆಗೆ ಪ್ರಿಂಟರ್ ಕೊಡುಗೆ
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಸ್ನೇಹ ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕಿ ಕುಸುಮ ಸ್ನೇಹ ಸಂಜೀವಿನಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ನೆರವೇರಿಸಿ ಪದಾಧಿಕಾರಿಗಳ ಜವಾಬ್ದಾರಿ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೀರಕಂಭ ಗ್ರಾಮ ವ್ಯಾಪ್ತಿಯ ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ ಪೌಷ್ಟಿಕ ಆಹಾರ ಪದ್ಧತಿ ಹಾಗೂ ಆರೋಗ್ಯ ಸಂಬಂಧಿಸಿದ ಮಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ ಘನ ತ್ಯಾಜ ಘಟಕ ದ ಬಗ್ಗೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ, , ಪಂಚಾಯತ್ ಕಾರ್ಯದರ್ಶಿ ಸವಿತಾ, ಬಂಟ್ವಾಳ ತಾಲೂಕು ಕೃಷಿ ಚಟುವಟಿಕೆಗಳ ವ್ಯವಸ್ಥಾಪಕಿ ಕುಮಾರಿ ಸಾಂಘವಿ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಸ್ನೇಹ ಸಂಜೀವಿನಿ ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಸಂಪನ್ಮೂಲ ಸಿಬ್ಬಂದಿ ರೂಪಶ್ರೀ ರಾಮಾಯಣ, ಮಹಾಭಾರತ, ಸಂಬಂಧಪಟ್ಟ ಪ್ರಶ್ನೆ ಹಾಗೂ ತುಳು ಒಗಟು ಗಳ ಬಗ್ಗೆ ಪ್ರಶ್ನೆ ಕೇಳಿದರು.
ಕಳೆದ ಬಾರಿ ಒಕ್ಕೂಟವನ್ನು ಯಶಸ್ವಿಯಾಗಿ ಮುನ್ನಡೆಸಿದ ಪದಾಧಿಕಾರಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಗ್ರ ಕೃಷಿ, ಪೌಷ್ಟಿಕ ತೋಟ, ಹೈಡ್ರೋಫೋನಿಕ್ ಮೇವು ಕೃಷಿ ಪದ್ಧತಿ, ದನದ ಶೆಡ್ ತಯಾರಿ ಮಾದರಿ ಹಾಗೂ ನಮ್ಮ ಪೂರ್ವಿಕರು ಸಾಂಪ್ರದಾಯಿಕ ಜೀವನದಲ್ಲಿ ಅವಳಡಿಸುತ್ತಿದ್ದ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಸ್ನೇಹ ಸಂಜೀವಿನಿ ಒಕ್ಕೂಟದ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ಆಟಿ ತಿಂಗಳಲ್ಲಿ ಮಾಡುವ ವಿವಿಧ ತಿಂಡಿ ತಿನಸುಗಳನ್ನು ತಯಾರಿಸಿ ತಂದು ಪ್ರದರ್ಶನಕ್ಕೆ ಇಟ್ಟಿದ್ದರು.
ಕಾರ್ಯಕ್ರಮದ ಬಳಿಕ ವಿವಿಧ ತಿಂಡಿ ತಿನಸುಗಳನ್ನು ಹಂಚಿಕೊಂಡು ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ವೇದಾವತಿ, ಜಯಂತಿ, ಪ್ರೇಮ ಪ್ರಾರ್ಥಿಸಿ, ಸ್ಥಳೀಯ ಸಂಪನ್ಮೂಲ ಸಿಬ್ಬಂದಿ ಜಯಂತಿ ಸ್ವಾಗತಿಸಿ,ಮುಖ್ಯ ಪುಸ್ತಕ ಬರಹಗಾರರಾದ ಮಲ್ಲಿಕಾ ವರದಿ ವಾಚಿಸಿ, ಕಾರ್ಯದರ್ಶಿ ದೀಪ ವೈ ಲೆಕ್ಕಪತ್ರ ಮಂಡನೆ ಮಾಡಿ,ಕೃಷಿ ಉದ್ಯೋಗ ಸಖಿ ಪೂಜಾ ಎಸ್ ವಂದಿಸಿದರು.ಪಶು ಸಖಿ ಪ್ರಚೀನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.ಕೃಷಿ ಸಖಿ ನವಿತಾ ಸಹಕರಿಸಿಡ್ಸರು
