ಬಂಟ್ವಾಳ : ಇಂದಿನ ವೈಜ್ಞಾನಿಕ ಯುಗದಲ್ಲಿ ತಂತ್ರಜ್ಞಾನದ ಕಲಿಕೆಯು ಬಹಳ ಮುಖ್ಯ. ನಿತ್ಯ ಜೀವನದಲ್ಲಿ ತಂತ್ರಜ್ಞಾನದ ಇತಿಮಿತಿಯೊಳಗೆ ಕಲಿಕೆಯು ನಡೆಯಬೇಕಾಗುತ್ತದೆ ಮೊಬೈಲ್ ಆಗಲಿ ಕಂಪ್ಯೂಟರ್ ಆಗಲಿ ದುರುಪಯೋಗ ಮಾಡದೆ ಅಗತ್ಯಕಷ್ಟೇ ಬಳಸುವುದರ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ ಇಲ್ಲವಾದರೆ ವ್ಯಸನವಾಗಬಹುದು ಎಂಬುದಾಗಿ ಲಯನ್ಸ್ ಕ್ಲಬ್ ಪ್ರಾಂತ್ಯ ಅಧ್ಯಕ್ಷ
ಬಾಲಕೃಷ್ಣ ಶೆಟ್ಟಿ ಹೇಳಿದರು. ಇದನ್ನೂ ಓದಿ : ಮಜಿ ವೀರಕಂಬ ಶಾಲೆಯಲ್ಲಿ ಅಗ್ನಿ ನಂದಕವನ್ನು ಬಳಸುವ ಪ್ರಾಯೋಗಿಕ ಚಟುವಟಿಕೆ

ಅವರು ಲಯನ್ಸ್ ಕ್ಲಬ್ ಅಮ್ಟೂರು ವತಿಯಿಂದ ವೀರಕಂಭ ಮಜಿ ಶಾಲೆಗೆ ಕಂಪ್ಯೂಟರ್ ಮೇಜುಗಳ ಹಸ್ತಾಂತರ ಮಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ವಲಯಾಧ್ಯಕ್ಷ ನೋಯಲ್ ಲೋಬೋ , ಅಮ್ಟೂರು ಲಯನ್ಸ್ ಕ್ಲಬ್ ಉಪಾಧ್ಯಕ್ಷ ವಿಲಿಯನ್ ಪೀರೇರಾ, ಸದಸ್ಯರಾದ ನವೀನ್ ಡಿಕುನ್ನ, ಜೇಮ್ಸ್ ಮಾರ್ಟಿಸ್, ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿ, ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು
ಶಾಲಾ ಶಿಕ್ಷಕಿಯರು ಸಹಕರಿಸಿದರು.