ತುಮಕೂರು: ದಾಸಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತಿ ಪ್ರಯುಕ್ತ ತುಮಕೂರು ನಗರದ ಶಿರಾಗೇಟ್‌ನ ಕನಕ ವೃತ್ತದಲ್ಲಿ ಸಾಂಸ್ಕೃತಿಕ ಕಲಾ ಹಾಗೂ ಕನಕ ದಾಸರ ಭಾವಚಿತ್ರ ಮೆರವಣಿಗೆಗೆ ‌ಗೃಹಸಚಿವರಾದ ಡಾ.ಜಿ.ಪರಮೇಶ್ವರ್  ಚಾಲನೆ ನೀಡಿದರು. ಈ ವೇಳೆ ಶ್ರೀ ಕನಕದಾಸರ ಪುತ್ಥಳಿಗೆ ಪುಷ್ಪ ನಮನದ ಮೂಲಕ ಭಕ್ತಿ ಸಮರ್ಪಣೆ ಮಾಡಿದೆ. ಇದನ್ನೂ ಓದಿ; ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗಳಿಸಿದ ಶೈನಾ ಮಣಿಮುತ್ತು ಅವರನ್ನು ಅಭಿನಂದಿಸಿದ – ಸಿ.ಎಂ

ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಾ. ಎಂ.ಆರ್.ಹುಲಿನಾಯ್ಕರ್, ಹಿರಿಯ ಪತ್ರಕರ್ತ ನಾಗಣ್ಣ, ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಹಾಗೂ ಕುರುಬ ಸಮಾಜದ ಹಿರಿಯ ಮುಖಂಡರುಗಳು   ಉಪಸ್ಥಿತರಿದ್ದರು.