4 ಮಾರ್ಚ್ 2024 ರಂದು HPV ಜಾಗ್ರತಿ ದಿನ, ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ ಮೊದಲ ವಾರ್ಷಿಕೋತ್ಸವ ಮತ್ತು ಯೆನೆಪೋಯ ವೈದ್ಯಕೀಯ ಕಾಲೇಜಿನ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಸ್ವಯಂ ಪ್ರೇರಿತರಾದ ಅರ್ಹ MBBS ವಿದ್ಯಾರ್ಥಿನಿಯರಿಗೆ HPV ಮೊದಲ ಡೋಸಿನ ಲಸಿಕಾ ಕಾರ್ಯಕ್ರಮವನ್ನು ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ, ಸಮುದಾಯ ಆರೋಗ್ಯ ವಿಭಾಗ, ಪೀಡಿಯಾಟ್ರಿಕ್ಸ್, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ, ಯೆನೆಪೋಯ ವೈದ್ಯಕೀಯ ಕಾಲೇಜು ಇವರ ಸಹಯೋಗದೊಂದಿಗೆ ಆಯೋಜಿಸಲಾಯಿತು.

ZYIO ನ ನಿರ್ದೇಶಕರು ಹಾಗೂ ಉಪಕುಲಪತಿ, ಡಾ.ಎಂ.ವಿಜಯಕುಮಾರ್, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ), ಡಾ. ಮರಿಯಮ್ ಅಂಜುಮ್ ಇಫ್ತಿಕರ್, ಮಂಗಳೂರಿನ ಪ್ರಥಮ ಸ್ತ್ರೀರೋಗತಜ್ಞರು ಮತ್ತು ಪ್ರಥಮ ಮಹಿಳಾ ರೊಬೊಟಿಕ್ ಸರ್ಜನ್, ZYIO ಮತ್ತು ಡಾ. ಅಭಯ್ ಎಸ್ ನಿರ್ಗುಡೆ, ಡೀನ್, ಮೆಡಿಸಿನ್ ಫ್ಯಾಕಲ್ಟಿ, ಯೆನೆಪೋಯ ಮೆಡಿಕಲ್ ಕಾಲೇಜು ಇವರಿಂದ ಆಯೋಜಿಸಲ್ಪಟ್ಟಿತು ಮೊದಲ HPV ವ್ಯಾಕ್ಸಿನೇಷನ್ ಡ್ರೈವ್ ಯಶಸ್ವಿಯಾಗಿದ್ದು, ಇದನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬೆಂಬಲಿಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಆರ್.ಸಿ.ಎಚ್ ಅಧಿಕಾರಿ ಡಾ.ರಾಜೇಶ್ ಬಿ.ವಿ ಅವರು ಕಾರ್ಯಕ್ರಮದ ಉಪಕ್ರಮ ಮತ್ತು ಯಶಸ್ಸನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ YMCH ನ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು ಮತ್ತು Ms. ಸುರ್ಮಿ ​​ಫರ್ಹಾದ್, ಖರೀದಿಯ ನಿರ್ದೇಶಕರು, ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಫಲಾನುಭವಿಗಳನ್ನು ಅಭಿನಂದಿಸಿದರು.

ಸಂಘಟನಾ ಪೀಠದ ಡಾ. ಅಂಜುಮ್ ಅವರು ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಎಂಬ ಅಂಶವನ್ನು ಒತ್ತಿ ಹೇಳಿದರು. ತಡೆಗಟ್ಟಬಹುದಾದ ಕ್ಯಾನ್ಸರ್ ಆಗಿದ್ದರೂ, ಸಾಮಾನ್ಯವಾಗಿ ಮಹಿಳೆಯರು ಕ್ಯಾನ್ಸರ್ನ ಮುಂದುವರಿದ ಹಂತದಲ್ಲಿರುತ್ತಾರೆ. 95% ಕ್ಕಿಂತ ಹೆಚ್ಚು ಗರ್ಭಕಂಠದ ಕ್ಯಾನ್ಸರ್ HPV ವೈರಸ್ನಿಂದ ಉಂಟಾಗುತ್ತದೆ. HPV ಲಸಿಕೆಯನ್ನು 9-26 ವರ್ಷ ವಯಸ್ಸಿನ ನಡುವೆ ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿದೆ .ಭಾರತ ಸರ್ಕಾರವು 9-14 ವರ್ಷಗಳ ನಡುವಿನ ಹೆಣ್ಣುಮಕ್ಕಳಿಗೆ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ HPV ಲಸಿಕೆಯನ್ನು ಹೊರತರಲು ಯೋಜಿಸುತ್ತಿರುವುದರಿಂದ, ಈ ಕಾರ್ಯಕ್ರಮದಲ್ಲಿ ವಿದ್ಯಾಲಯದ 18 ರಿಂದ 26 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಒಟ್ಟು ನೀಡಲಾಗಿದೆ.