ಬಂಟ್ವಾಳ ತಾಲೂಕು ಜನಜಾಗೃತಿ ಸದಸ್ಯರು ಹಾಗೂ ಬಂಟ್ವಾಳ ತಾಲೂಕಿನ ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಮಾಧವ ವಲವೂರು ಅವರು ಅನಾರೋಗ್ಯದಿಂದ ಇದ್ದು ಬಂಟ್ವಾಳ ತಾಲೂಕಿನ ಜನಜಾಗೃತಿ ವೇದಿಕೆಯ ಸದಸ್ಯರು ಶ್ರೀಯುತರ ಮನೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ರೂಪಾಯಿ 15,000 ಸಹಾಯಧನವನ್ನು ವಿತರಿಸಿದರು.

ಈ ಸಂದರ್ಭ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರೊನಾಲ್ಡ್ ಡಿಸೋಜ, ಗ್ರಾಮಾಭಿವೃಡಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಜನಜಾಗೃತಿ ವೇದಿಕೆಯ ಸದಸ್ಯರಾದ ಶೇಖರ ಸಾಮಾನಿ ,ಭಟ್ಯಪ್ಪ ಶೆಟ್ಟಿ , ಕೃಷ್ಣಪ್ಪ ನಾವುರ ,ಪುಷ್ಪರಾಜ್ ,ಭಾರತಿ ಶೆಟ್ಟಿ, ಪ್ರವೀಣ್ ಪೂಜಾರಿ ಕಾಡಬೆಟ್ಟು, ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಮೊದಲದವರು ಉಪಸ್ಥಿತರಿದ್ದರು.