ಯುವವಾಹಿನಿ( ರಿ.) ಮಾಣಿ ಘಟಕದ ಪದಗ್ರಹಣ ಸಮಾರಂಭ

ಕಲ್ಲಡ್ಕ : ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ದಿಕ್ಕು ತಪ್ಪಿದ್ದು, ಅಂಥವರನ್ನು ಸರಿ ಮಾಡುವ ಉತ್ತಮ ಕೆಲಸ ಯುವವಾಹಿನಿ ಸಂಘಟನೆಯ ಮೂಲಕ ಆಗಬೇಕು ಎಂದು ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಕಾರವಾರ ಹೇಳಿದರು. ಇದನ್ನೂ ಓದಿ : ಯುವವಾಹಿನಿ ಡೆನ್ನಾನ ಡೆನ್ನನ 2026 – ಟೈಟಲ್ ಸಾಂಗ್ ಬಿಡುಗಡೆ

ಅವರು ಮಾರ್ಚ್ 29 ರವಿವಾರ ಮಾಣಿ ಕೊಡಾಜೆಯ ನಕ್ಷತ್ರ ಅಡಿಟೋರಿಯಂನಲ್ಲಿ ನಡೆದ ಯುವವಾಹಿನಿ( ರಿ.) ಮಾಣಿ ಘಟಕದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಶಿವರಾಜ್ ಪಿ ಆರ್ ವಹಿಸಿದ್ದರು. ಯುವವಾಹಿನಿ(ರಿ.)ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ರವರು ಗಣೇಶ್ ಪೂಜಾರಿ ಕೊಡಾಜೆ ನೇತೃತ್ವದ ನೂತನ ಸಮಿತಿಗೆ ಪದಪ್ರಧಾನ ನೆರವೇರಿಸಿ ಶುಭ ಹಾರೈಸಿದರು.

ಹೆಚ್ಚುವರಿ ಅಡ್ವೋಕೇಟ್ ಜನರಲ್,ಕರ್ನಾಟಕ. ತಾರನಾಥ ಪೂಜಾರಿ ಇರುವೈಲ್ ರವರು ಡಾ. ತ್ರಿವೇಣಿ ರಮೇಶ್ ಸಂಪಾದಕದಲ್ಲಿ ಮೂಡಿಬಂದ ಮಾಣಿಕ್ಯ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮಂಗಳೂರು ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಜೈ ತುಳುನಾಡು (ರಿ.) ಬಂಟ್ವಾಳ ಎಗ್ಗೆಗೆ ಯುವವಾಹಿನಿ ಮಾಣಿ ಘಟಕದ “ಸಾಧನ ಪುರಸ್ಕಾರ ” ನೀಡಿ ಶುಭ ಹಾರೈಸಿದರು.

ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ ಭೂ ದಾಖಲೆಗಳ ಉಪನಿರ್ದೇಶಕರಾದ ಪುಷ್ಪರಾಜ್ ಪೂಜಾರಿ ವಿದ್ಯಾರ್ಥಿ ವೇತನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಯುವ ವಾಹಿನಿ ಮಾಣಿ ಘಟಕದ ವೃತ್ತಿ ನಿರತ ಶಿಕ್ಷಕ ಸದಸ್ಯರಿಗೆ “ಅಕ್ಷರ ಪುರಸ್ಕಾರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಧ್ಯಕ್ಷ ಶಿವರಾಜ್ ಪಿಆರ್ ತನ್ನ ಅಧ್ಯಕ್ಷತೆ ಅವಧಿಯಲ್ಲಿ ಸಹಕರಿಸಿದ ಕಾರ್ಯಕಾರಿ ಸಮಿತಿಯ ಸದಸ್ಯರುಗಳನ್ನು ಗೌರವಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ಐ ಎಂ ಎ ಮಂಗಳೂರು ಅಧ್ಯಕ್ಷ ಡಾಕ್ಟರ್ ಸದಾನಂದ ಪೂಜಾರಿ, ವಕೀಲ ರಂಜಿತ್ ಪೂಜಾರಿ ಮೈರ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸೋಮ ಸುಂದರ್ ಸಾಲಿಯಾನ್, ಮಾಣಿ ಘಟಕದ ಕಾರ್ಯದರ್ಶಿ ದೀಪಕ್ ಪೆರಾಜೆ ಉಪಸ್ಥಿತರಿದ್ದರು.

ಶ್ರೇಯ ಸಿಂಧು ಸೃಷ್ಟಿ ಪ್ರಾರ್ಥಿಸಿ, ಸಚಿನ್ ಪೆರಾಜೆ ಸ್ವಾಗತಿಸಿದರು, ದೀಪಕ್ ಪೆರಾಜೆ ವಾರ್ಷಿಕ ವರದಿ ವಾಚಿಸಿ, ನಾಗೇಶ್ ಕೊಂಕಣಪದವು ನೂತನ ಸಮಿತಿಯ ಪಟ್ಟಿ ವಾಚಿಸಿದರು. ವಿಶ್ವನಾಥ ಊರ್ದಿಲ ವಂದಿಸಿದರು. ರಾಜೇಶ್ ಬಲ್ಯ ಹಾಗೂ ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಪದಗ್ರಹಣ ಕಾರ್ಯಕ್ರಮದ ಮೊದಲು ತ್ರಿನೇತ್ರ ಕಲಾವಿದರು ಕುಡ್ಲ ಇವರಿಂದ ಬ್ರಹ್ಮರಕ್ಕಸೆ ತುಳು ನಾಟಕ ಪ್ರದರ್ಶನಗೊಂಡಿತು.