ಹೈದರಾಬಾದ್: ಮದುವೆಯಾಗಲು (Marriage) ನಿರಾಕರಿಸಿದ ಯುವತಿಗೆ ಯುವಕನೊಬ್ಬ ಹೆಚ್‌ಐವಿ ಪಾಸಿಟಿವ್ ಇಂಜೆಕ್ಷನ್ (HIV Positive Injection) ನೀಡಿದ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ. ಇದನ್ನೂ ಓದಿ : ರೂ. 2 ಕೋಟಿ 56 ಲಕ್ಷ ವೆಚ್ಚದಲ್ಲಿ ನಡೆಯುವ ವಿವಿಧ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಚಾಲನೆ

ಮೆಡ್ಚಲ್ ಪ್ರದೇಶದ ನಿವಾಸಿಯಾಗಿರುವ ಮನೋಹರ್ ಎಂಬ ಯುವಕನೊಂದಿಗೆ ಯುವತಿಯ ಮದುವೆ ನಿಶ್ಚಯಿಸಲಾಗಿತ್ತು. ಆದರೆ ಯುವಕನಿಗೆ ಹೆಚ್‌ಐವಿ ಪಾಸಿಟಿವ್ ಇರುವುದನ್ನು ತಿಳಿದ ಬಳಿಕ ಯುವತಿ ಮದುವೆಗೆ ನಿರಾಕರಿಸಿದ್ಧಾಳೆ. ಮಾರ್ಚ್ 11 ರಂದು ತನ್ನನ್ನ ಮದುವೆಯಾಗುವುಂತೆ ಮನೋಹರ್ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಾಕರಿಸಿದಾಗ ಯುವತಿಗೆ ಬಲವಂತವಾಗಿ ಹೆಚ್‌ಐವಿ ಪಾಸಿಟಿವ್ ಇಂಜೆಕ್ಷನ್ ನೀಡಿದ್ದಾನೆ.

ಇಂಜೆಕ್ಷನ್ ನೀಡಿದ ಪರಿಣಾಮ ಯುವತಿಗೆ ತೀವ್ರ ಜ್ವರ ಶುರುವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಯುವತಿ ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದಾಳೆ. ಸದ್ಯ ಯುವತಿ ದೂರಿನ ಆಧಾರದ ಮೇಲೆ ಆರೋಪಿ ಮನೋಹರ್‌ನನ್ನ ಪೊಲೀಸರು ಬಂಧಿಸಿದ್ದಾರೆ.