ಯೆನೆಪೊಯ : ಅಂತರರಾಷ್ಟ್ರೀಯ ಯೋಗ ದಿನಾಚರಣೆ 2025 ರ ಪರವಾಗಿ ಯೆನೆಪೊಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ನರಿಂಗಾನ, ಮತ್ತು ಯೆನೆಪೊಯ ವೈದ್ಯಕೀಯ ಕಾಲೇಜು, ಮಂಗಳೂರು, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಂಶೋಧನಾ ಮಂಡಳಿ, ನವದೆಹಲಿ ಮತ್ತು ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ‘ಯೋಗ ಸಮಾವೇಶ’ ಬ್ಯಾನರ್ ಅಡಿಯಲ್ಲಿ “ವೈದ್ಯಕೀಯ ವೃತ್ತಿಪರರಿಗೆ ಕೆಲಸದ ಸ್ಥಳದಲ್ಲಿ ಯೋಗ ಅಭ್ಯಾಸಗಳು” – ಸೆಮಿನಾರ್ ಮತ್ತು ಕರ‍್ಯಾಗಾರ ನಡೆಯಿತು.
ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಮುಸಬ್ಬ ಅಧ್ಯಕ್ಷತೆ ವಹಿಸಿದ್ದರು. ಇದನ್ನೂ ಓದಿ : ಅಂತರರಾಷ್ಟ್ರೀಯ ಯೋಗ ದಿನಾಚರಣೆ”ಯ ಅಂಗವಾಗಿ “ಯೋಗ ಸಮಾವೇಶ”
ಮುಖ್ಯ ಅತಿಥಿಗಳಾಗಿ ಯೆನೆಪೊಯ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಡೀನ್ ಡಾ. ಅಭಯ್ ನರ‍್ಗುಡೆ ಅವರು ಮುಖ್ಯ ಭಾಷಣ ಮಾಡಿದರು.ನಂತರ ಸಂಪನ್ಮೂಲ ವ್ಯಕ್ತಿಗಳ ಭಾಷಣದೊಂದಿಗೆ ಕರ‍್ಯಕ್ರಮ ಮುಂದುವರೆಯಿತು. ಕರ‍್ಯಕ್ರಮವು “ಆರೋಗ್ಯಕರ ಜೀವನದಲ್ಲಿ ಯೋಗದ ಪಾತ್ರ” ಎಂಬ ವಿಷಯದ ಕುರಿತು ಯೆನೆಪೊಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೃದ್ಧಾರೋಗ್ಯ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಪ್ರಭಾ ಅಧಿಕಾರಿ ಮತ್ತು “ಕೆಲಸದ ಕಛೇರಿಗಳಲ್ಲಿ ಯೋಗಾಭ್ಯಾಸ” ಎಂಬ ವಿಷಯದ ಕುರಿತು ಯೆನೆಪೊಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಪುನೀತ್ ರಾಘವೇಂದ್ರ ಕೆ ಆರ್ ಅವರು ಮಾತನಾಡಿದರು.
ಡಾ. ಪದ್ಮಶ್ರೀ ಪ್ರಾಸ್ತವಿಕ ಮಾತನಾಡಿದರು. ಅತಿಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಕೃತಜ್ಞತೆಯ ಸಂಕೇತವಾಗಿ ಸ್ಮರಣಿಕೆಯನ್ನು ನೀಡುವ ಮೂಲಕ ಗೌರವಿಸಲಾಯಿತು. ಯೆನೆಪೊಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ಉಪನ್ಯಾಸಕಿ ಡಾ. ಪ್ರತೀಕ್ಷಾ ವಂದಿಸಿ, ಕಾರ‍್ಯಕ್ರಮವು 4 ನೇ ವರ್ಷದ ಬಿಎನ್‌ವೈಎಸ್ ವಿದ್ಯಾರ್ಥಿನಿ ಫರ್ಹನಾ ಎಂ. ಆರ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಫಾತಿಮಾ ಹ್ಯಾರಿಸ್ ಅವರು ಪ್ರರ್ಥನಾ ಗೀತೆ ಹಾಡಿದರು.