ಯೆನೆಪೊಯ (ಘೋಷಿತ ವಿಶ್ವವಿದ್ಯಾಲಯ), ಲಿಂಗ ಸಂವೇದಿಕರಣ ಕೋಶ (GSC) ಮಾ.8 ರಂದು ‘ಅಂತರಾಷ್ಟ್ರೀಯ ಮಹಿಳಾ ದಿನ’ ACCELERATE ACTION “ನಿರೂಪಣಾ ವಿಷಯ ದಿಗೆ ಆಚರಿಸಿದೆ
ಯೆನೆಪೊಯ (ಘೋಷಿತ ವಿಶ್ವವಿದ್ಯಾಲಯ)ದ ಲಿಂಗ ಸಂವೇದಿಕರಣ ಕೋಶ (GSC) ೮.೦೩.೨೦೨೫ ರಂದು ಮಂಗಳೂರಿನ ಯೆಂಡ್ಯೂರನ್ಸ್ ವಲಯದಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನ’ ಅಂಗವಾಗಿ ಒಂದು ವಿಶೇಷ ಕರ‍್ಯಕ್ರಮವನ್ನು ಆಯೋಜಿಸಿತು. ಶ್ರೀಮತಿ ಅನುಷ ಅವರು ಸ್ವಾಗತ ಭಾಷಣ ನೀಡಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಉSಅ ಕರ‍್ಯರ‍್ಶಿ ಡಾ. ಗ್ಲಾಡಿಸ್ ಆರ್ ಕೊಲಾಕೊ ಅವರು ೨೦೨೪-೨೫ ನೇ ಸಾಲಿನ ಕರ‍್ಯಕ್ರಮ ವರದಿಯನ್ನು ಮಂಡಿಸಿದರು.
ಅತಿಥಿಯಾದ ಯೆನೆಪೊಯ (ಘೋಷಿತ ವಿಶ್ವವಿದ್ಯಾಲಯ)ದ ಕುಲಸಚಿವಡಾ. ಗಂಗಾಧರ ಸೋಮಯಾಜಿ ಅವರು ಲಿಂಗ ಸಮಾನತೆಯ ಮಹತ್ವವನ್ನು ಕುರಿತು ಉಲ್ಲೇಖಿಸಿದರು. ಗಣ್ಯರು ಯೆನೆಪೊಯ ಡಿಗ್ರಿ ಕಾಲೇಜಿನ ಮುಖ್ಯ ಗ್ರಂಥಾಲಯಾಧಿಕಾರಿಣಿ ಶ್ರೀಮತಿ ಸೀಮಾ ಲತಾ ಅವರಿಗೆ ‘ಅತ್ಯುತ್ತಮ ಮಹಿಳಾ ಉದ್ಯೋಗಿ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ನಗರ ಅಅಖಃ ಸಹಾಯಕ ಪೊಲೀಸ್ ಆಯುಕ್ತೆ ಶ್ರೀಮತಿ ಗೀತಾ ಕುಲರ‍್ಣಿ ಅವರು ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗುವ ಅಗತ್ಯತೆಯನ್ನು ಪ್ರಸ್ತಾಪಿಸಿದರು. ಯೆನೆಪೊಯ (ಘೋಷಿತ ವಿಶ್ವವಿದ್ಯಾಲಯ) ಲಿಂಗ ಸಂವೇದಿಕರಣ ಕೋಶದ ಸಂಚಾಲಕಿ ಡಾ. ಲೀನಾ ಕೆ.ಸಿ. ಅವರು ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ, ಪುರುಷರು ಮತ್ತು ಮಹಿಳೆಯರು ಸಮಾನತೆಯನ್ನು ಸ್ವೀಕರಿಸಬೇಕಾದ ಅಗತ್ಯವನ್ನು ಒತ್ತಿಹೇಳಿದರು.
ಈ ಕರ‍್ಯಕ್ರಮದಲ್ಲಿ ಗಣ್ಯರು, ಪ್ರಾಧ್ಯಾಪಕ ಸಂಯೋಜಕರು, ಲಿಂಗ ಸಂವೇದಿ ರ‍್ತೃಗಳು ಹಾಗೂ ಯೆನೆಪೊಯ (ಘೋಷಿತ ವಿಶ್ವವಿದ್ಯಾಲಯ)ನ ವಿವಿಧ ಸಂಸ್ಥೆಗಳ ವಿದ್ಯರ‍್ಥಿ ಪ್ರತಿನಿಧಿಗಳು ಭಾಗವಹಿಸಿದರು. ಉದ್ಘಾಟನಾ ಕರ‍್ಯಕ್ರಮದ ಬಳಿಕ ಧನ್ಯವಾದಹಾಗೂ ರಾಷ್ಟ್ರೀಯ ಗೀತೆ ಹಾಡಲಾಯಿತು. ನಂತರ, ದಿನದ ವಿಷಯ ಪ್ರತಿಬಿಂಬಿಸುವ ವಿದ್ಯರ‍್ಥಿಗಳ ಸಾಂಸ್ಕೃತಿಕ ಕರ‍್ಯಕ್ರಮಗಳು ನಡೆದವು.