ಶಿಕ್ಷಣ, ರೋಗಿಗಳ ಆರೈಕೆ, ಸಂಶೋಧನೆ ಮತ್ತು ಸಮುದಾಯ ಸಬಲೀಕರಣದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಮತ್ತು ಗಾಂಬಿಯಾ ಗಣರಾಜ್ಯದ ಹೈಕಮಿಷನ್ ನಡುವೆ ಮೇ 25 ರಂದು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ವು ಗಾಂಬಿಯಾದ ವಿದ್ಯರ‍್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಉಚಿತ ವಿದ್ಯರ‍್ಥಿವೇತನವನ್ನು ಮತ್ತು ಬೋಧನಾ ಆಸ್ಪತ್ರೆಯು ಗಾಂಬಿಯಾದ ರೋಗಿಗಳಿಗೆ ಕಡಿಮೆ ವೆಚ್ಚದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಿದೆ

ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಗಾಂಬಿಯಾದ ಹೈಕಮಿಷನರಾದ ಮುಸ್ತಫಾ ಜವಾರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಉಪಕುಲಪತಿಗಳದ ಡಾ.ವಿಜಯಕುಮಾರ್ ಹಾಗು ಯೆನೆಪೋಯ ಕುಲಸಚಿವರಾದ ಡಾ.ಗಂಗಾಧರ ಸೋಮಯಾಜಿ ಉಪಸ್ಥಿತರಿದ್ದರು.