ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾನಿಲಯ, ಮಂಗಳೂರು, ಯೇನೆಪೋಯ ನರ್ಸಿಂಗ್ ಕಾಲೇಜಿನ ನರ್ಸಿಂಗ್ ಅಡ್ಮಿನಿಸ್ಟ್ರೇಷನ್ ವಿಭಾಗ ಹಾಗೂ ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು, ಸೋಂಕು ತಡೆ ಮತ್ತು ನಿಯಂತ್ರಣ ವಿಭಾಗ, ಯೆನೆಪೋಯ ಮೆಡಿಕಲ್ ಕಾಲೇಜು ಹಾಸ್ಪಿಟಲ್, ಟ್ರೆನ್ಡ್ ನರ್ಸೆಸ್ ಅಸೋಸಿಯೇಶನ್, ಕರ್ನಾಟಕ ವಿಭಾಗದ ಸಂಯೋಜನೆಯಲ್ಲಿ “ ಬ್ರೇಕಿಂಗ್ ದ ಚೈನ್ ಆಫ್ ಹೆಲ್ತ್ ಕೇರ್ ಅಸೋಸಿಯೇಟೆಡ್ ಇನ್ಫೆಕ್ಷನ್”(Breaking the chain of HAIs Stewardship, Safety and Surveillance) ಎಂಬ ರಾಜ್ಯಮಟ್ಟದ ಕಾರ್ಯಾಗಾರವನ್ನು ಜೂ .26  ರಂದು ಯೇನೆಪೋಯ ವಿಶ್ವ ವಿದ್ಯಾನಿಲಯದಲ್ಲಿ ನಡೆಸಲಾಯಿತು.

ಇದನ್ನೂ ಓದಿ : ಮಾರನಹಳ್ಳಿಯಲ್ಲಿ ಗುಡ್ಡ ಕುಸಿತ | ಶಿರಾಡಿಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್

ಕಾರ್ಯಾಗಾರದ ಅಧ್ಯಕ್ಷತೆಯನ್ನು ಡಾ. ಲೀನ ಕೆ ಸಿ ಪ್ರಾಂಶುಪಾಲರು ಯೇನೆಪೋಯ ನರ್ಸಿಂಗ್ ಕಾಲೇಜು ವಹಿಸಿದ್ದರು. ಡಾ. ಹಬೀಬ್ ರಹಮಾನ್, ಮೆಡಿಕಲ್ ಸೂಪರಿಂಟೆAಡೆAಟ್ ಯೇನೆಪೋಯ ವೈದ್ಯಕೀಯ ಆಸ್ಪತ್ರೆ ಇವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಡಾ. ರೋಶಲ್ ಟೆಲ್ಲಿಸ್ ಸೋಂಕು ತಡೆ ಮತ್ತು ನಿಯಂತ್ರಣ ವಿಭಾಗದ ಮುಖ್ಯಸ್ಥರು, ಶ್ರೀಮತಿ ಸತ್ಯದೇವಿ ನರ್ಸಿಂಗ್ ಸೂಪರಿಂಟೆAಡೆAಟ್ ಯೇನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಇವರು ಉಪಸ್ಥಿತರಿದ್ದರು. ಒಟ್ಟಾಗಿ ಸುಮಾರು ೬೦ ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.