ಮಂಗಳೂರಿನ ದೇರಳಕಟ್ಟೆ ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಲ್ಲಿ ಸರ್ ಸಿ.ವಿ. ರಾಮನ್ ಅವರ “ರಾಮನ್ ಪರಿಣಾಮ” ಆವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು, ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನ ಎಂಬ ವಿಷಯದ ಅಡಿಯಲ್ಲಿ ಫೆ.28 ರಂದು ಆಯೋಜಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ, ವಿವಿಧ ಘಟಕ ಕಾಲೇಜುಗಳು, ಕೇಂದ್ರಗಳ ವಿದ್ಯಾರ್ಥಿಗಳಿಗೆ ಇ-ಪೋಸ್ಟರ್, ಪಿಚ್. ಆನ್. ಐಡಿಯಾ, ರಸಪ್ರಶ್ನೆ ಮತ್ತು ಕಿರು-ಚಲನಚಿತ್ರಗಳಂತಹ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.

ತಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಧ್ಯಾಪಕರು ಮತ್ತು ಅತ್ಯುತ್ತಮ ವಿಭಾಗಗಳನ್ನು ಸಂಶೋಧನಾ ಪ್ರಶಸ್ತಿಗಳನ್ನು ನೀಡುವ ಮೂಲಕ ಆಚರಣೆಯ ಸಂರ್ಭದಲ್ಲಿ ಗುರುತಿಸಲಾಯಿತು.
ಪ್ರಾರ್ಥನೆ ಮತ್ತು ದೀಪ ಬೆಳಗಿಸುವುದರೊಂದಿಗೆ ಕಾರ‍್ಯಕ್ರಮ ಆರಂಭವಾಯಿತು. ಯೆನೆಪೊಯ ಸಂಶೋಧನಾ ಕೇಂದ್ರದ ನಿರ್ದೆಶಕಿ ಡಾ. ರೇಖಾ ಪಿ.ಡಿ ಸ್ವಾಗತಿಸಿ ರಾಷ್ಟ್ರೀಯ ವಿಜ್ಞಾನ ದಿನ, ಅತ್ಯುತ್ತಮ ಸಂಶೋಧನೆ ಮತ್ತು
ದೇಶವನ್ನು ಮುಂದೆ ತರುವಲ್ಲಿ ಅದರ ಮಹತ್ವದ ಕುರಿತು ಮಾತನಾಡಿದರು.
ಡಾ. ಕೆ.ಎಸ್. ಗಂಗಾಧರ ಸೋಮಯಾಜಿ, ರಿಜಿಸ್ಟ್ರಾರ್, ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಅವರು ಹೆಚ್ಚು ಉಲ್ಲೇಖಿತ ಸಂಶೋಧನಾ ಪ್ರಬಂಧಗಳು, ಅತ್ಯುತ್ತಮ ಸಂಶೋಧನಾ ಲೇಖನಗಳು, ಅತ್ಯುತ್ತಮ ಸಂಶೋಧಕರು, ಅತ್ಯುತ್ತಮ ಆವಿಷ್ಕಾರಕರು ಮತ್ತು ಅತ್ಯುತ್ತಮ ವಿಭಾಗಗಳಿಗೆ ಅವರ ಸಂಶೋಧನಾ ಕೊಡುಗೆಗಳನ್ನು ಗುರುತಿಸಲು ಪ್ರಶಸ್ತಿಗಳನ್ನು ಪ್ರಕಟಿಸಿದರು.
ಡಾ. ಎಂ. ವಿಜಯಕುಮಾರ್, ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ವಿಜ್ಞಾನ, ನಾವೀನ್ಯತೆ ಮತ್ತು ಅನ್ವಯಿಕ ಸಂಶೋಧನೆಯನ್ನು ಉತ್ತೇಜಿಸಲು ವಿಶ್ವವಿದ್ಯಾನಿಲಯ ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದರು ಹಾಗೂ ಸಾಮಾಜಿಕ ಪ್ರಾಮುಖ್ಯತೆಯ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಯೆನೆಪೊಯ ಟೆಕ್ನಾಲಜಿ ಇನ್ಕ್ಯುಬೇರ‍್ನ ಪಾತ್ರವನ್ನು ತಮ್ಮಅಧ್ಯಕ್ಷೀಯ ಭಾಷಣದಲ್ಲಿ ಒತ್ತಿ ಹೇಳಿದರು.
ಡಾ. ಜೆ. ವೆಂಕಟೇಶನ್ ವಂದಿಸಿದರು. ಯೆನೆಪೊಯ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯ ವಿಭಾಗದ ಡಾ. ನವ್ಯಾ ಎನ್. ಕಾರ‍್ಯಕ್ರಮ ನಿರ್ವಹಿಸಿದರು. ಡಾ. ಬಿ.ಎಚ್. ಶ್ರೀಪತಿ ರಾವ್, ಪ್ರೊ ವೈಸ್ ಚಾನ್ಸಲರ್
ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ, ಡಾ. ಬಿ.ಟಿ. ನಂದೀಶ್, ಪರೀಕ್ಷಾ ನಿಯಂತ್ರಕರು, ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಮತ್ತು ಸಂಚಾಲಕ ಡಾ. ಜೆ. ವೆಂಕಟೇಶನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂರ‍್ಭದಲ್ಲಿ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಡೀನ್‌ಗಳು, ಹಿರಿಯ ಪ್ರಾಧ್ಯಾಪಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
