ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ, ಆಯುಷ್ ಸಚಿವಾಲಯ, ಭಾರತ ಸರ್ಕಾರ ಜಂಟಿಯಾಗಿ ಪ್ರಕೃತಿ ವಿಜ್ಞಾನ – ಪ್ರಕೃತಿ ಚಿಕಿತ್ಸೆ ವಿಜ್ಞಾನದ ಕುರಿತು ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಮಾರ್ಚ್ 11 ಮತ್ತು 12, 2024 ರಂದು ಯೆನೆಪೋಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿತು.
ಮಾರ್ಚ್ 11 2024 ರಂದು ಉದ್ಘಾಟನೆ ನಡೆಯಿತು.
ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕಿ ಡಾ.ಪ್ರೊ.ಕೆ ಸತ್ಯ ಲಕ್ಷ್ಮಿ ಗೌರವ ಅತಿಥಿಯಾಗಿ ಆಗಮಿಸಿ ಪ್ರಕೃತಿ ಚಿಕಿತ್ಸಕ ವೈದ್ಯರಾಗಿ ರೋಗನಿರ್ಣಯದ ಮಹತ್ವದ ಕುರಿತು ಮಾತನಾಡಿದರು.
ಯೆನೆಪೋಯ ದಂತ ಮಹಾವಿದ್ಯಾಲಯದ ಡೀನ್ ಡಾ.ಶಾಮ್ ಎಸ್ ಭಟ್ ಅತಿಥಿಯಾಗಿ ಭಾಗವಹಿಸಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಬಗ್ಗೆ ತಿಳುವಳಿಕೆ ನೀಡಿದರು.
ಪ್ರೊ.ಡಾ.ಬಿ. ಎಚ್ ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ರೋಗನಿರ್ಣಯದ ಪಾತ್ರವನ್ನು ಹೇಳಿದರು.
ಪ್ರಾಂಶುಪಾಲರಾದ ಡಾ ಪುನೀತ್ ರಾಘವೇಂದ್ರ ಕೆ ಆರ್. ಸ್ವಾಗತಿಸಿ, ಡಾ.ಪದ್ಮಶ್ರೀ ವಂದಿಸಿದರು.