ಯೇನೆಪೋಯ ನಸ್ಸಿಂಗ್ ಕಾಲೇಜು ಇದರ 19ನೇ ಪದವಿ ಪ್ರದಾನ ಕಾರ್ಯಕ್ರಮ ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಜರಗಿತು. ೧೪೭ ನಸ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

ಯೇನೆಪೋಯ ನಸ್ಸಿಂಗ್ ಕಾಲೇಜಿನ ಡೀನ್ ಡಾಕ್ಟರ್ ಲೀನಾ ಕೆ.ಸಿ. ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಯೇನೆಪೋಯ ನಸ್ಸಿಂಗ್ ಕಾಲೇಜು ಪದವಿ ಪ್ರದಾನ ಕಾರ್ಯಕ್ರಮ

ಮುಖ್ಯ ಅತಿಥಿಯಾಗಿ ಭಾರತ ಸರಕಾರದ ನಸ್ಸಿಂಗ್ ಸಲಹೆಗಾರರಾದ ಡಾ. ದೀಪಿಕ .ಸಿ ಖಾಖ ಇವರು ಭಾಗವಹಿಸಿದ್ದರು. ಅವರು ಆಧುನೀಕರಣದ ಈ ಸಮಯದಲ್ಲಿ ಮಾನವೀಯತೆ, ಗುಣಮಟ್ಟದ ಆರೈಕೆ ಮತ್ತು ಸಹಾನುಭೂತಿಯನ್ನು ರೋಗಿಗಳ ಆರೈಕೆಯಲ್ಲಿ ರೂಢಿಸಿಕೊಳ್ಳಬೇಕಾಗಿ ಹೇಳಿದರು.

ಡಾ. ಹೆಚ್ ಆರ್ ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ದಕ್ಷಿಣ ಕನ್ನಡ ಗೌರವ ಅತಿಥಿಯಾಗಿ ಭಾಗವಹಿಸಿ ಜೀವ ಉಳಿಸುವ ಪವಿತ್ರ ಕಾಯಕವನ್ನು ಮಾಡುತ್ತಿರುವ ಶುಶ್ರೂಷಕರ ವೃತ್ತಿ ಶ್ರೇಷ್ಠ ಎಂದು ಹೇಳಿದರು.

ಶ್ರೀಮತಿ ಜಾನೆಟ್ ಮಿರಾಂಡ, ಡಾ. ಬಿನ್ಶಾ ಸಿ ಪಾಪಚ್ಚನ್ ಹಾಗೂ ವಿಜಿಪ್ರಸಾದ್ ಸಿ ಅವರು ಪದವೀಧರರನ್ನು ಪ್ರಸ್ತುತಪಡಿಸಿದರು. ಶೈಕ್ಷಣಿಕ ರ‍್ಷದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಉಪ ಪ್ರಾಂಶುಪಾಲರಾದ ಡಾ. ಪ್ರಿಯ ರೇಷ್ಮಾ ಅರಾನ್ನ ಸ್ವಾಗತಿಸಿದರು. ಪ್ರೊ. ಶಶಿಕುಮಾರ್ ಜಾವಡಗಿ ವಂದಿಸಿದರು. ಶ್ರೀಮತಿ ಪವಿತ್ರ ಹಾಗೂ ಶ್ರೀಮತಿ ವಿನೀಶ ನಿರೂಪಿಸಿದರು.