ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್್ಸ ಸೈನ್ಸ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಮಂಗಳೂರು. ಇದರ 6ನೆಯ ಪದವಿ ಪ್ರದಾನ ಸಮಾರಂಭದ ನಿಮಿತ್ತ ಎರಡನೆಯ ದಿನದ ಕಾರ್ಯಕ್ರಮವು ನವೆಂಬರ್ ೨೬ರಂದು ದೇರಳಕಟ್ಟೆಯ ಯೆಂಡೂರೆನ್ಸ್ನಲ್ಲಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಎನ್.ಐ.ಟಿ.ಕೆ ನಿರ್ದೇಶಕ ಡಾ. ಬಿ. ರವಿ ಅವರು ಪದವೀಧರರು ತಾವು ಕಲಿತ ಯಾವುದೇ ವಿಷಯಕ್ಕಿಂತ ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಕಾಲಿಡುತ್ತಿದ್ದಾರೆ. ಇಂದು ಯಾಂತ್ರೀಕೃತಗೊAಡ ಮತ್ತು ಕೃತಕ ಬುದ್ಧಿಮತ್ತೆಯಿಂದ ಜೀವನ ನಡೆಸಲ್ಪಡುತ್ತದೆ ಎಂದರು.

ಗೌರವ ಅತಿಥಿಯಾಗಿದ್ದ ಅದಾನಿ ಪವರ್ ಲಿಮಿಟೆಡ್ (ಯುಪಿಸಿಎಲ್) ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಕಿಶೋರ್ ಆಳ್ವ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಮತ್ತು ಸಂಶೋಧನಾ-ಆಧಾರಿತ ಶೈಕ್ಷಣಿಕ ಸಂಸ್ಕ್ರತಿ  ಯನ್ನು ಪೋಷಿಸಿದ್ದಕ್ಕಾಗಿ ಯೆನೆಪೋಯ ಸಂಸ್ಥೆಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಕುತೂಹಲ,

ಯೆನೆಪೊಯ (ಡೀಮ್ಡ್ ಯೂನಿವರ್ಸಿಟಿ) ಪರೀಕ್ಷಾ ನಿಯಂತ್ರಕರಾದ ಡಾ. ಬಿ.ಟಿ. ನಂದೀಶ್ ಪದವಿಯು ಕೇವಲ ಅರ್ಹತೆಯಲ್ಲ, ಸಮಾಜಕ್ಕೆ ಕೊಡುಗೆ ನೀಡುವ ಬದ್ಧತೆಯನ್ನು ಸಂಕೇತಿಸುತ್ತದೆ ಎಂದು ಉಲ್ಲೇಖಿಸಿದರು.

ಸೌದಿ ಅರೇಬಿಯಾದ ಯೆನೆಪೋಯ ಇಂಟರ್ನಾ್ಯಷನಲ್ ಶಾಲೆಯ ಸಿಇಒ ಪ್ರೊ. ಅರುಣ್ ಎ. ಭಾಗವತ್, ಈ ಬ್ಯಾಚ್ ಎನ್‌ಇಪಿ ೨೦೨೦ರ ಅಡಿಯಲ್ಲಿ ಪದವಿ ಪಡೆದು ಮೊದಲಿಗರಾಗಿರುವುದು ಅತ್ಯಂತ ಮಹತ್ವದ ಮೈಲುಗಲ್ಲು ಎಂದು ಹೇಳಿದರು.

ಪ್ರಭಾರ ಪ್ರಾಂಶುಪಾಲರಾದ ಪ್ರೊ. ಜೀವನ್ ರಾಜ್ ಅವರು ಸಾಂಸ್ಥಿಕ ವರದಿಯನ್ನು ಪ್ರಸ್ತುತಪಡಿಸುತ್ತಾ, ಪದವಿ ಬ್ಯಾಚ್‌ನ ಸಮರ್ಪಣೆ ಮತ್ತು ಬೆಳವಣಿಗೆಯ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿ, ವಿದ್ಯಾರ್ಥಿಗಳ ಸಾಧನೆಗಳು ಶೈಕ್ಷಣಿಕ ವಾತಾವರಣ ಮತ್ತು ಅಧ್ಯಾಪಕರ ಸಹಯೋಗದ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದರು.

ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಮತ್ತು ಉಪಪ್ರಾಂಶುಪಾರಾದ ಪ್ರೊ. ಶರೀನಾ ಪಿ. ಸ್ವಾಗತ ಭಾಷಣ ಮಾಡಿದರು. ಶ್ರೀ ನಾರಾಯಣ್ ಸುಕುಮಾರ್ ಎ. ಉಪಪ್ರಾಂಶುಪಾಲರು, ಧನ್ಯವಾದ ಅರ್ಪಿಸಿದರು. ವಿಜ್ಞಾನ ವಿಭಾಗದ ಡೀನ್ ಪ್ರೊ. ಇಸ್ಮಾಯಿಲ್ ಬಿ, ಕಲಾ ಮತ್ತು ಸಮಾಜ ವಿಜ್ಞಾನ ವಿಭಾಗದ ಡೀನ್ ಡಾ. ವಸಂತ್ ಕುಮಾರ್, ವಿಭಾಗಗಳ ಮುಖ್ಯಸ್ಥರು, ಸ್ನಾತಕೋತ್ತರ ಸಂಯೋಜಕರು, ಎಸಿಒಇಗಳು, ಅಧ್ಯಾಪಕರು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ಉಪಸ್ಥಿತರಿದ್ದರು.

ಶ್ರೀಮತಿ ಪಿನಾಕಿನಿ ಶೆಟ್ಟಿ, ಶ್ರೀಮತಿ ಚರಿತ್ರಾ, ಮತ್ತು ಡಾ. ಸರೀನ್ ಶೇಖ್ ಸಮಾರಂಭವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಬಿ.ಸಿ.ಎ, ಬಿ.ಎಸ್ಸಿ. ಎಂ.ಸಿ.ಎ ಮತ್ತು ಎಂ.ಎಸ್ಸಿ ಕಾರ್ಯಕ್ರಮಗಳ ೯೭೪ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆದರು.