ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೆಯನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಮಂಗಳೂರು ಇದರ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ನವ್ಯಾರಂಭ ಪಿಜಿ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನಾ ಅಧಿವೇಶನವು ಸೆ. 18 ರಂದು ವೈ.ಎಂ.ಕೆ ಆಡಿಟೋರಿಯಂ, ಯೆನೆಪೊಯ ಇನ್ಸಿಟಟ್ಯೂಟ್ ಆಫ್ ಆರ್ಟ್ಸ್ ಸೆಯನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಕೂಳೂರು ಇಲ್ಲಿ ನಡೆಯಿತು.
ಡಾ. ಬಿ. ಸಾಯಿ ಗಿರಿಧರ್, ಶ್ರೀ ಸತ್ಯಸಾಯಿ ಉನ್ನತ ಶಿಕ್ಷಣ ಸಂಸ್ಥೆಯ ಮಾಜಿ ಉಪಕುಲಪತಿ, ಪುಟ್ಟಪರ್ತಿ ಅವರು ಸಮಾರಂಭಕ್ಕೆ ಚಾಲನೆ ನೀಡಿದರು. ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ ಹೆಚ್ ಅವರು ಪರಿಶ್ರಮ, ಸಮಯಪಾಲನೆ, ಉದ್ಯೋಗ ಹುಡುಕುವ ಎಲ್ಲಾ ಕಾರ್ಯಗಳ ಮಹತ್ವ ಕುರಿತು ಮಾತನಾಡಿದರು.
ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೆಯನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಮಂಗಳೂರು ಇದರ ಪ್ರಾಂಶುಪಾಲರು ಮತ್ತು ವಿಜ್ಞಾನ ವಿಭಾಗದ ಡೀನ್ ಡಾ.ಅರುಣ್ ಎ. ಭಾಗವತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ “ಡಿಜಿಟಲ್ ಇಮ್ಮಾರ್ಟಾಲಿಟಿ” ಪರಿಕಲ್ಪನೆಯನ್ನು ಮತ್ತು “ಯು ಟು ಇಂಟರ್ಫೇಸ್” ನ ಮಹತ್ವವನ್ನು ತಿಳಿಸಿದರು. ಅಧಿವೇಶನದಲ್ಲಿ ಡಾ. ಶರೀನಾ ಪಿ. ಉಪ ಪ್ರಾಂಶುಪಾಲರು ಮತ್ತು ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದ ಡೀನ್, ಡಾ. ಜೀವನ್ ರಾಜ್ ಮತ್ತು ಶ್ರೀ ನಾರಾಯಣ್ ಸುಕುಮಾರ್ ಎ, ಉಪ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಎ.ಬಿಎ ವಿಭಾಗದ ಪ್ರಾಧ್ಯಾಪಕಿ ಮತ್ತು ಸ್ನಾತಕೋತ್ತರ ಪದವಿಯ ಸಂಯೋಜಕರಾದ ಡಾ. ನಮ್ರತಾ ಎಸ್. ಅವರು ಕಾರ್ಯಕ್ರಮದ ಯಶಸ್ವಿಗೆ ಸ್ಪಂದಿಸಿದರು. ಹಾಸ್ಪಿಟಾಲಿಟಿ ಸೈನ್ಸ್ನ ಮುಖ್ಯಸ್ಥರಾದ ಶ್ರೀ ಮೆರ್ವಿನ್ ಜೈಸನ್ ವಾಜ್ ಅಥಿತಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕರಾದ ಶ್ರೀ ವಾಸುದೇವ ಶೆಣೈ ವಂದಿಸಿ, ಎಂಸಿಎ, ಅಧ್ಯಾಪಕರಾದ ಶ್ರೀಮತಿ ಚೈತ್ರ ಕೊಪ್ಪಳ ಅವರು ಕಾರ್ಯಕ್ರಮ ನಿರ್ವಹಿಸಿದರು.
ಎಂ.ಬಿಎ, ಎಂ.ಎಸ್ಸಿ. (ಮೈಕ್ರೊಬಯಾಲಜಿ), ಎಂ.ಎಸ್ಸಿ. (ಆಹಾರ ವಿಜ್ಞಾನ ಮತ್ತು ಪೋಷಣೆ) ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.