ಸೆಂಟರ್ ಫಾರ್ ಸಬ್ಸ್ಟೆನ್ಸ್ ಅಬ್ಯುಸು ಪ್ರೆವೆಂಷನ್, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ )ಮತ್ತು ಸಿಎಫ್ಎಸ್ಎಪಿ ಯೆನೆಪೋಯ ದಂತ ಕಾಲೇಜಿನ ವತಿಯಿಂದ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು.
. ತಂಬಾಕಿನ ದುಷ್ಪರಿಣಾಮದ ಸಂದೇಶವನ್ನು ಯೆನೆಪೋಯ ದಂತ ಕಾಲೇಜಿನ ದಂತ ವೈದ ವಿದ್ಯಾರ್ಥಿಗಳು ಮೂಕಾಬಿನಯ, ಜಾಗ್ರತಿ ನೃತ್ಯ ಮತ್ತು ಸಾಕ್ಷ್ಯ ಚಿತ್ರ ಪ್ರರ‍್ಶನದ ಮೂಲಕ ರೋಗಿಗಳಿಗೆ ಹಾಗೂ ಅವರ ಪರಿಚಾರರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಹಬೀಬ್ ರೆಹಮಾನ್ ಎ. ಎ, ವೈದ್ಯಕೀಯ ಅಧಿಕ್ಷಕರು, ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಮುಖ್ಯ ಅತಿಥಿಯಾಗಿ ಹಾಗೂ ಡಾ. ಲಕ್ಷ್ಮಿಕಾಂತ್ ಚಾತ್ರ, ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಗೌರವ ಅತಿಥಿಯಾಗಿ ಭಾಗವಹಿಸಿ ತಂಬಾಕು ದುಷ್ಪರಿಣಾಮದ ಸಂದೇಶವನ್ನು ನೀಡಿದರು.
ಡಾ. ಮಾಜಿ ಜೋಸ್, ಉಪ ನರ‍್ದೇಶಕರು,ಸೆಂಟರ್ ಫಾರ್ ಸಬ್ಸ್ಟೆನ್ಸ್ ಅಬ್ಯುಸು ಪ್ರೆವೆಂಷನ್, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ )ದ ಮಾರ್ಗದರ್ಶನದಲ್ಲಿ ಈ ಕರ‍್ಯಕ್ರಮವನ್ನು ನಡೆಸಲಾಯಿತು.
ಸುಮಾರು 150 ಕ್ಕೂ ಹೆಚ್ಚಿನ ಜನರು, ರೋಗಿಗಳು, ಪರಿಚಾರರು ಉಪಸ್ಥಿತರಿದ್ದರು. ಶ್ರೀಯುತ ಭರತ್ ಕುಮಾರ್, ದಂತ ರೋಗಿ ಸಂಯೋಜಕರು ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು. ಕರ‍್ಯಕ್ರಮದಲ್ಲಿ ಡಾ. ಹಸನ್ ರ‍್ಫ್ರಾಜ್,ಉಪ ಪ್ರಾಂಶುಪಾಲರು, ಡಾ. ಶ್ರುತಿ ನಾಯಕ್, ಡಾ. ಸಯ್ಯದ್ ಮಿಗ್ದಾಧು, ಡಾ. ಸೌಮ್ಯ, ಡಾ. ಶಫೀಸ್ ಕೋಯಾ ಹಾಗೂ ಇತರರು ಉಪಸ್ಥಿತರಿದ್ದರು.