ಯೆನೆಪೊಯ ದಂತ ವಿದ್ಯಾಲಯದಲ್ಲಿ ಪ್ರೋಸ್ಟೋಡಾಂಟಿಸ್ಟ್ ದಿನಾಚರಣೆ ಕಾರ್ಯಕ್ರಮ ಜ.24ರಂದು ಪ್ರಾಂಶುಪಾಲ ಡಾ.ಲಕ್ಷೀಕಾಂತ ಚಾತ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಮಂಗಳೂರು ನಗರ ಸಂಚಾರ ವಿಭಾಗದ ಎ.ಸಿ.ಪಿ .ಗೀತಾ ಡಿ. ಕುಲಕರ್ಣಿ ಭಾಗವಹಿಸಿ ಪ್ರಾಸ್ಟೊಡಾಂಟಿಕ್ಸ್ ವಿಭಾಗದ ಚಿಕಿತ್ಸಾ ವಿಧಾನಗಳ ಬಗ್ಗ ಜಾಗೃತಿ ಮೂಡಿಸಲು ಕರಪತ್ರ ಬಿಡುಗಡೆ ಮಾಡಿದರು. ಬಳಿಕ ಸೈಬರ್ ಅಪರಾಧ ಮತ್ತು ರಸ್ತೆ ಸುರಕ್ಷತೆಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.
ಡೀನ್ ಡಾ.ಶಾಮ್ ಎಸ್. ಭಟ್, ಉಪ-ಪ್ರಾಂಶುಪಾಲ ಡಾ. ಹಸನ್ ಸರ್ಫರಾಜ್ ಮತ್ತು ಇತರ ವಿಭಾಗದ ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.
ಪ್ರಾಸ್ಟೊಡಾಂಟಿಕ್ಸ್‌ನಲ್ಲಿ (ಅಂತಿಮ BDS) ಮತ್ತು ಸ್ನಾತಕೋತ್ತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನುಮತ್ತು ಪದಕಗಳನ್ನು ನೀಡಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಕಾಲೇಜು ಪ್ರವೇಶದ್ವಾರದಲ್ಲಿ ವಿಭಾಗದ ವಿಶೇಷತೆ ಮತ್ತು ಚಿಕಿತ್ಸಾ ವಿಧಾನಗಳ ಬಗ್ಗ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.
ಪ್ರೋಸ್ಟೋಡಾಂಟಿಸ್ಟ್ ವಿಭಾಗದ ಎಚ್‌ಒಡಿ ಡಾ.ರಾಜೇಶ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.