ಯೆನೆಪೋಯ ಡೆಂಟಲ್ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಕೋಶವು ಇನ್‌ಸ್ಟಿಟ್ಯೂಷನ್‌ನ ಇನ್ನೋವೇಶನ್ ಕೌನ್ಸಿಲ್ ಸಹಯೋಗದೊಂದಿಗೆ ಜೂ.25 ರಂದು ‘ಜರ್ನಲ್ ಜರ್ನಿಸ್ ನ್ಯಾವಿಗೇಟಿಂಗ್ ದಿ ಪಾಥ್‌ವೇ ಟು ಮನುಸ್ಕ್ರಿಪ್ಟ್ ಅಕ್ಸೆಪ್ಟೆನ್ಸ್’ ಅತಿಥಿ ಉಪನ್ಯಾಸವನ್ನು ಆಯೋಜಿಸಿತು.
ಪ್ರಾಂಶುಪಾಲ ಡಾ.ಲಕ್ಷ್ಮೀಕಾಂತ್ ಚಾತ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ನಾತಕೋತ್ತರ ಅವಧಿಯಲ್ಲಿ ಪ್ರಕಟಣೆಯ ಮಹತ್ವವನ್ನು ಹೇಳಿದರು.
ಮಂಗಳೂರಿನ ಮಣಿಪಾಲ ದಂತ ಕಾಲೇಜಿನ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥೆ ಮತ್ತು ಸಂಪನ್ಮೂಲ ವ್ಯಕ್ತಿ ಡಾ.ಸುಪ್ರಭಾ ಬಿ.ಎಸ್ ಅವರನ್ನು ಡಾ.ಸುಪ್ರಭಾ ಉಪಾಧ್ಯ ಅವರು ಪರಿಚಯಿಸಿದರು.
ಡಾ. ಸುಪ್ರಭಾ ಅವರು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಲಹೆಗಳ ಜೊತೆಗೆ ವೈಜ್ಞಾನಿಕ ಹಸ್ತಪ್ರತಿಗಳ ಪ್ರಕಟಣೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಯೆನೆಪೋಯ ದಂತ ಮಹಾವಿದ್ಯಾಲಯದ ಡೀನ್ ಡಾ.ಶಾಮ್ ಎಸ್. ಭಟ್ ಸ್ವಾಗತಿಸಿ ಕಾರ್ಯಕ್ರಮದ ಸಂಚಾಲಕಿ ಡಾ.ವೀಣಾ ಕೆ.ಎಂ. ಮತ್ತು ಡಾ.ಸ್ನೇಹಾ ಕುಡ್ವ ವಂದಿಸಿದರು. ಡಾ. ರಕ್ಷಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.