ಈ ಪ್ರಪಂಚದಲ್ಲಿ ಹಲವು ಜಾತಿಯ ಆಮೆಗಳಿದ್ದು, ಅವುಗಳಲ್ಲಿ ಅವೆಷ್ಟೋ ಅಳಿವಿನಂಚಿಗೆ ತಲುಪಿವೆ. ಹಾಗಾಗಿ ಅವುಗಳನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಮೇ 23 ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ:  ಬಣ್ಣ ಬಣ್ಣದ ಚಿಟ್ಟೆಯ ನೊಡೋಣ ಬನ್ನಿ ……….

ವಿಶ್ವ ಆಮೆ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಅಮೆರಿಕನ್‌ ಟಾರ್ಟಾಯಿಸ್‌ ರೆಸ್ಕ್ಯೂ ಎಂಬ ಲಾಭರಹಿತ ಸಂಸ್ಥೆ ಪ್ರಾರಂಭಿಸಿತು. ಇದು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಆಮೆಗಳನ್ನು ರಕ್ಷಿಸುವ ಅವುಗಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸಿ ಕೊಡುವ ಉದ್ದೇಶವನ್ನು ಹೊಂದಿದೆ.

ವಿಜ್ಞಾನಿಗಳು ಹೇಳುವ ಪ್ರಕಾರ ಅಮೆಗಳು ಈ ಭೂಮಿಯ ಮೇಲಿರುವ ಅತ್ಯಂತ ಹಳೆಯ ಪ್ರಾಣಿಗಳಾಗಿವೆ. ಆಮೆಗಳು ಭೂಮಿಯ ಮೇಲೆ ಸುಮಾರು 220 ಮಿಲಿಯನ್‌ ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಂದರೆ ಡೈನೋಸಾರ್‌ ಭೂಮಿಯ ಮೇಲೆ ಬರುವುದಕ್ಕೂ ಮುಂಚೆಯೇ ಇವುಗಳ ಅಸ್ತಿತ್ವವಿತ್ತು. ಆದರೆ ಇಂದು ಇವುಗಳ ಅಸ್ತಿತ್ವಕ್ಕೆ ಬೆದರಿಕೆ ಉಂಟಾಗಿದೆ. ಹಾಗಾಗಿ ಇವುಗಳ ರಕ್ಷಣೆಯ ಉದ್ದೇಶದಿಂದ ಈ ಲಾಭರಹಿತ ಸಂಸ್ಥೆ ಈ ವಿಶೇಷ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.

ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿಡುವಲ್ಲಿ ಆಮೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆಲಿವ್‌ ರಿಡ್ಲಿ, ಲೆದರ್‌ ಬ್ಯಾಕ್‌ ಮುಂತಾದ ಸಮುದ್ರ ಆಮೆಗಳು ಕರಾವಳಿ ಪ್ರದೇಶಗಳನ್ನು ಸ್ವಚ್ಛಗೊಳಿಸವಲ್ಲಿ ಮತ್ತು ಸತ್ತ ಮೀನುಗಳನ್ನು ಕೊಳೆತ ಸಸ್ಯರಾಶಿಗಳನ್ನು ತಿನ್ನುವ ಮೂಲಕ ಸಮುದ್ರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭೂಮಿಯ ಮೇಲೆ ವಾಸಿಸುವ ಆಮೆಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.