ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ”ವನ್ನುಆಚರಿಸಲಾಯಿತು.

ಜೂನ್ ೧೨ ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನುಆಚರಿಸಲಾಗುತ್ತದೆ. ೧೯೮೬ರ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯ ಜಾರಿ ಅತೀ ಅಗತ್ಯವಾಗಿದೆ. ಮಕ್ಕಳನ್ನು ಮತ್ತು ೧೮ ವರ್ಷದೊಳಗಿನ ಕಿಶೋರಗಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದ ಶಿಕ್ಷಾರ್ಹ ಅಪರಾಧವಾಗಿದೆ ಪ್ರತಿ ಮಕ್ಕಳು ತಮ್ಮ ಸುತ್ತ ಮುತ್ತಲೂ ಬಾಲ ಕಾರ್ಮಿಕರುಕಂಡು ಬಂದಲ್ಲಿ ನೇಮಿಸಿಕೊಂಡ ಮಾಲಕರು ಹಾಗೂ ಪೋಷಕರು ತಿಳುವಳಿಕೆ ಹೇಳಿ ಮಗುವನ್ನು ಶಾಲೆಗೆ ಸೇರಿಸಿ ಎಂದು ಸಹ ಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಂ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.   ಇದನ್ನೂ ಓದಿ : ಕಲ್ಲಡ್ಕ ಶ್ರೀ ರಾಮ ಆಂಗ್ಲ ಮಾಧ್ಯಮ ಶಾಲೆ: “ವಿಕ್ರಮಾದಿತ್ಯ”ನೂತನ ಭವನದ ಲೋಕಾರ್ಪಣೆ

ನಂತರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ – ೨೦೨೫ ರ ಪ್ರಮಾಣ ವಚನವನ್ನು ೭ನೇ ತರಗತಿಯಅಪ್ರಮೇಯ ತೋಳ್ಪಾಡಿ ಬೋಧಿಸಿದನು.  ಇದನ್ನೂ ಓದಿ : ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ

ಈ ಸಂದರ್ಭದಲ್ಲಿ ಅಧ್ಯಾಪಕರಾದ ಅನ್ನಪೂರ್ಣ, ದೇವಿಕಾ, ರಾಜೇಶ್ವರಿ, ಜ್ಯೋತಿಶ್ರೀ, ವಾಣಿಶ್ರೀ, ಗುಣಶ್ರೀ, ಸ್ನೇಹಾ, ದೇವಕಿ, ಗಗನ್ ದೀಪ್ ಹಾಗೂ ಮಾಲತಿ ಉಪಸ್ಥಿತರಿದ್ದರು.