ಬಿ.ಸಿ.ರೋಡ್ ಸ್ಮಾರ್ಟ್ ಸಿಟಿ ಕಟ್ಟಡದ ಒಂದನೇ ಮಹಡಿಯಲ್ಲಿ ಶ್ರೀಮತಿ ಉಷಾ ಕಮಲಾಕ್ಷ ಪಂಜಿಕಲ್ಲು ರವರ ಮಾಲಕತ್ವದ “ಅಲಂಕಾರ್ ಕಲಾ ಆರ್ಟ್ಸ್ ” ಶುಭಾರಂಭಗೊಂಡಿತು.

ಹಿರಿಯರಾದ ಲೀಲಾ ಹಾಗೂ ಚಂದಪ್ಪ ಪೂಜಾರಿ ಪಂಜಿಕಲ್ಲು ದಂಪತಿಗಳು ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಶ್ರೀ ಬಾಲೇಶ್ವರ ವೈದ್ಯನಾಥ ಕೊಡಮಣಿತಾಯ ದೇವಸ್ಥಾನ ಪಂಜಿಕಲ್ಲು ಇಲ್ಲಿನ ಕೋಟಿ ಚೆನ್ನಯ ಪಾತ್ರಿಗಳಾದ ನೋಣು ಹಾಗೂ ನೋಣಯ್ಯ ಪೂಜಾರಿ ದೀಪ ಪ್ರಜ್ವಲಿಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಗಡಿ ಪ್ರಧಾನರಾದ ಪದ್ಮನಾಭ ಪೂಜಾರಿ, , ಪ್ರಶಾಂತ್ ಗಟ್ಟಿ ಬೋಳಿಯಾರ್, ರೋನಾಲ್ಡ್ ಡಿʼಸೋಜ, ಸಂಸ್ಥೆಯ ಮಾಲಕರ ಕುಟುಂಬಸ್ಥರು, ಹಿತೈಷಿ ಗಳು, ಗೆಳೆಯರು ಉಪಸ್ಥಿತರಿದ್ದರು.

ಈ ಸಂಸ್ಥೆಯಲ್ಲಿ ವಿವಿಧ ರೀತಿಯ ವೇಷ ಭೂಷಣಗಳು, ಭರತನಾಟ್ಯ, ಛದ್ಮವೇಷಕ್ಕೆ ಸಂಬಂಧಪಟ್ಟ ಬಟ್ಟೆ, ಆಭರಣಗಳು, ಹಾಗೂ ಮದುಮಗಳ ಬಾಡಿಗೆ ಆಭರಣಗಳು ಮಿತದರದಲ್ಲಿ ಲಭ್ಯವಿದೆ.