ನವದೆಹಲಿ: ಯುಎಇಯಿಂದ (UAE) ಹೊರಟಿರುವ 81 ಸಾವಿರ ಟನ್‌ ಕಚ್ಚಾ ತೈಲ(Crude oil) ನಾಳೆ ಭಾರತಕ್ಕೆ (India) ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಯುಎಇಯಿಂದ ಭಾರತೀಯ ಧ್ವಜ ಹೊತ್ತ ಹಡಗು ಭಾರತಕ್ಕೆ ಬರುವ ಮಾರ್ಗದಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ : ಗಂಡನನ್ನು ಅರೆಸ್ಟ್‌ ಮಾಡಿ ಹೆಂಡತಿನ ಮಂಚಕ್ಕೆ ಕರಿತಿದ್ದ ಇನ್ಸ್‌ಪೆಕ್ಟರ್‌ – ನೊಂದ ಮಹಿಳೆಯಿಂದ ಸಿಎಂಗೆ ದೂರು

ಮಾರ್ಚ್ 14 ರಂದು ಯುಎಇಯಿಂದ ಹೊರಟ ಭಾರತೀಯ ಧ್ವಜದ ಹಡಗು ಜಗ್ ಲಾಡ್ಕಿ ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದತ್ತ ಬರುತ್ತಿದೆ. ಹಡಗು ಮತ್ತು ಅದರಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಅವರು ನಾಳೆ ಮುಂದ್ರಾ ಬಂದರು ತಲುಪಲಿದ್ದಾರೆ ಎಂದು ತಿಳಿಸಿದರು.

ಎಲ್‌ಪಿಜಿಯನ್ನು ಹೊತ್ತುಕೊಂಡು ಪರ್ಷಿಯನ್ ಕೊಲ್ಲಿಯಿಂದ ಹೊರಟು ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟಿ ಭಾರತಕ್ಕೆ ಆಗಮಿಸಿದ ಶಿವಾಲಿಕ್ (Shivalik) ಹಡಗಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಡಗಿನಿಂದ ಸರಕು ಸಾಗಣೆಯಲ್ಲಿ ಯಾವುದೇ ವಿಳಂಬವಾಗದಂತೆ ಬಂದರಿನಲ್ಲಿ ದಾಖಲೆಗಳು, ಆದ್ಯತೆಯ ಬರ್ತಿಂಗ್ ಮತ್ತು ಎಲ್ಲವನ್ನೂ ವ್ಯವಸ್ಥೆ ಮಾಡಲಾಗಿದೆ ಎಂದರು.

ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಘಟನೆ ವರದಿಯಾಗಿಲ್ಲ, ಮತ್ತು ನಾವು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇಡುತ್ತಿದ್ದೇವೆ. ನಾವು ಪ್ರತಿಯೊಂದು ಹಡಗು ಮತ್ತು ಅದರ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಶನಿವಾರ ವರದಿಯಾಗಿರುವಂತೆ 22 ಹಡಗುಗಳು, 611 ಭಾರತೀಯ ನಾವಿಕರನ್ನು ಹೊಂದಿರುವ 22 ಭಾರತೀಯ ಧ್ವಜ ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ಹಾರ್ಮುಜ್ ಜಲಸಂಧಿಯ ಪಶ್ಚಿಮದಲ್ಲಿವೆ ಎಂದು ವಿವರಿಸಿದರು.