ತೆಲುಗಿನ ʻದಿ ಇಂಡಿಯಾ ಹೌಸ್ʼ (The India House) ಸಿನಿಮಾ ಶೂಟಿಂಗ್ ಸೆಟ್ನಲ್ಲಿ ಭಾರೀ ಅವಘಡ ಸಂಭವಿಸಿದೆ. ಚಿತ್ರೀಕರಣದ ವೇಳೆ ನೀರಿನ ಟ್ಯಾಂಕರ್ ಸ್ಫೋಟಗೊಂಡು, ಪ್ರವಾಹ ರೀತಿಯಲ್ಲಿ ನೀರು ನುಗ್ಗಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿ : ಸಂತ ಕಬೀರ ದಾಸ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಗೌರವ ನಮನ
ನೀರಿನ ದೊಡ್ಡ ಟ್ಯಾಂಕರ್ ಒಡೆದು ಪ್ರವಾಹ ಸೃಷ್ಟಿಯಾದ ಪರಿಣಾಮ ಸಹಾಯಕ ಕ್ಯಾಮೆರಾಮೆನ್ ಮತ್ತು ಇನ್ನೂ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ : ಎಸಿ ಬಳಕೆಗೆ ಹೊಸ ನಿಯಮ – ದೇಶಕ್ಕೆ 18,000 ಕೋಟಿ ಉಳಿತಾಯ
ಶಂಷಾಬಾದ್ ಬಳಿ ಸಿನಿಮಾ ಶೂಟಿಂಗ್ಗಾಗಿ ದೊಡ್ಡ ನೀರಿನ ಟ್ಯಾಂಕರ್ ನಿರ್ಮಾಣ ಮಾಡಲಾಗಿತ್ತು. ಭಾರೀ ಒತ್ತಡದಿಂದಾಗಿ ನೀರಿನ ಟ್ಯಾಂಕರ್ ಸ್ಫೋಟಗೊಂಡು ಪ್ರವಾಹವೇ ಸೃಷ್ಟಿಯಾಯ್ತು. ಭಾರೀ ಪ್ರಮಾಣದ ನೀರಿನ ವೇಗಕ್ಕೆ ಸಿಕ್ಕಿ ಕ್ಯಾಮೆರಾಮೆನ್, ಇತರ ಸಿಬ್ಬಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ : International Lynx Day ಜೂ.11 ಅಂತರಾಷ್ಟ್ರೀಯ ಲಿಂಕ್ಸ್ (ಕಾಡು ಬೆಕ್ಕು) ದಿನ
ಖ್ಯಾತನಟ ರಾಮ್ ಚರಣ್ ನಿರ್ಮಾಣದ ಈ ʻದಿ ಇಂಡಿಯಾ ಹೌಸ್ʼ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದ ಹೊರತಾಗಿಯೂ ಸೆಟ್ನಲ್ಲಿ ಅವಘಡ ಸಂಭವಿಸಿದ್ದು, ಚಿತ್ರೀಕರಣಕ್ಕಾಗಿ ಹಾಕಲಾದ ಸೆಟ್ ಸಂಪೂರ್ಣ ನಾಶವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.