ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ.) ಬಂಟ್ವಾಳ ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ವಾಮದಪದವು, ಪ್ರೇರಣ ಜ್ಞಾನ ವಿಕಾಸ ಕೇಂದ್ರ ವಾಮದಪದವು ಇದರ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ  ಇದನ್ನೂ ಓದಿ : ಬಾಂಗ್ಲಾದೇಶದ ವಾಯುಪಡೆ ವಿಮಾನ ದುರಂತ – ಸಾವಿನ ಸಂಖ್ಯೆ 27ಕ್ಕೆ ಏರಿಕೆ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ.) ಬಂಟ್ವಾಳ ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ವಾಮದಪದವು, ಪ್ರೇರಣ ಜ್ಞಾನ ವಿಕಾಸ ಕೇಂದ್ರ ವಾಮದಪದವು ಇದರ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ವಾಮದಪದವ್ ನಲ್ಲಿ ರವಿವಾರ ಜರಗಿತು.

ಜನಜಾಗೃತಿ ವೇದಿಕೆ ಸದಸ್ಯರಾದ ಹರಿಂದ್ರ ಪೈ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ.) ಧರ್ಮಸ್ಥಳ ಸಮುದಾಯ ಅಭಿವೃದ್ಧಿಯ ನಿರ್ದೇಶಕರಾದ ಮಹಾಬಲ ಕುಲಾಲ್ ಮಾತನಾಡಿ ಇಂಥ ಕಾರ್ಯಕ್ರಮಗಳು ನಮ್ಮ ಮೂಲ ಸಂಸ್ಕೃತಿಯನ್ನು ಇಂದಿನ ಜನಾಂಗಕ್ಕೆ ತಿಳಿಸಲು ಸಹಕಾರಿಯಾಗಿದೆ ಎಂದರು. ಬಂಟ್ವಾಳ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್, ನೀಲಕಂಠೇಶ್ವರ ದೇವಸ್ಥಾನ ವಾಮದಪದವುನ ಮುಖ್ಯಸ್ಥರಾದ ಗೋಪಾಲಕೃಷ್ಣ ಚೌಟ, ವಿದ್ಯಾ ಆಪ್ತ ಸಂಯೋಜಕರು ಸಾಂತ್ವನ ಕೇಂದ್ರ ಬಂಟ್ವಾಳ, ಅನಿತಾ ಪ್ರಭು ಒಕ್ಕೂಟದ ಅಧ್ಯಕ್ಷರು, ಸವಿತಾ ವಗ್ಗ ವಲಯ ಮೇಲ್ವಿಚಾರಕರು, ಗುಣವತಿ ಜ್ಞಾನವಿಕಾಸ ಕೇಂದ್ರದ ಸಂಯೋಜಕಿ, ಸೇವಾ ಪ್ರತಿನಿಧಿಗಳಾದ ಮೋಹನ್ ದಾಸ್ ಗಟ್ಟಿ, ಮಾಧವ ಭಾರತಿ ತಾರಾನಾಥ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಕವಿತಾ ವಂದಿಸಿ,ಶಿವರಾಜ್ ಗಟ್ಟಿ ನಿರೂಪಿಸಿ.