ಬಂಟ್ವಾಳ: ಕೈ ಕಾಲು ತೊಳೆಯುವ ವೇಳೆ ಕೆರೆಗೆ ಬಿದ್ದು ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಾರಿಂಜದಲ್ಲಿ ನಡೆದಿದೆ. ಇದನ್ನೂ ಓದಿ : ಸೌಂದರ್ಯದ ವೃದ್ಧಿಗಾಗಿ ನ್ಯಾಚುರಲ್ ಐಸ್ ಕ್ಯೂಬ್ ಟಿಪ್ಸ್
ವಗ್ಗ ಕಾರಿಂಜ ಕ್ರಾಸ್ ನಿವಾಸಿ ಶ್ರೀಧರ್ ಮೂಲ್ಯ ಅವರ ಮಗ ಚೇತನ್ ( 19) ಮೃತಪಟ್ಟ ವಿದ್ಯಾರ್ಥಿ. ಕಾರಿಂಜೇಶ್ವರ ದೇವಾಲಯದ ಕೆಳಗೆ ಇರುವ ಕೆರೆಯಲ್ಲಿ ಕಾಲು ತೊಳೆಯಲು ಇಳಿದ ವೇಳೆ ಆಯತಪ್ಪಿ ಕೆರೆಗೆ ಬಿದ್ದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಚೇತನ್ ಪ್ರತಿ ಶನಿವಾರ ಕಾರಿಂಜ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ, ಇಂದು ಅದೇ ರೀತಿ ಸ್ನೇಹಿತ ಪ್ರಶ್ವಿತ್ ನ ಜೊತೆಗೆ ದೇವಸ್ಥಾನಕ್ಕೆ ತೆರಳಿದ್ದ. ಈ ವೇಳೆ ದೇವಾಲಯದ ಕೆರೆಯಲ್ಲಿ ಕಾಲು ತೊಳೆಯಲು ಮೆಟ್ಟಿಲು ಇಳಿಯುತ್ತಿದ್ದಂತೆ ಕಾಲು ಜಾರಿ ಕೆರೆಯೊಳಗೆ ಚೇತನ್ ಬಿದ್ದಿದ್ದಾನೆ. ಇದನ್ನೂ ಓದಿ :ಬೆಂಗಳೂರು: ಕಾಲ್ತುಳಿತ ಕೇಸ್ – ಕೊಹ್ಲಿ ವಿರುದ್ಧ ದೂರು ದಾಖಲು
ಜೊತೆಯಲ್ಲಿ ಇದ್ದ ಪ್ರಶ್ವಿತ್ ಗೆ ಈಜು ತಿಳಿಯದ ಕಾರಣ ಆತ ಸ್ಥಳೀಯರಿಗೆ ಪೋನ್ ಮಾಡಿದ್ದಾನೆ. ಕೂಡಲೇ ಸ್ಥಳೀಯರು ಸೇರಿದ್ದು, ಶ್ರವಣ್ ಜೈನ್ ಹಾಗೂ ಉದಯ ಎಂಬಿಬ್ಬರು ಕೆರೆಗೆ ಹಾರಿ ಹುಡುಕಲು ಆರಂಭಿಸಿ, ಚೇತನ್ ನನ್ನು ಕೆರೆಯಿಂದ ಮೇಲಕ್ಕೆ ಎತ್ತಿ ಹಾಕಿದ್ದಾರೆ, ಆದರೆ ಅದಾಗಲೇ ಚೇತನ್ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಬಂಟ್ವಾಳ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ :ಚಿಕ್ಕಬಳ್ಳಾಪುರ | ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ