ವಿಟ್ಲ : ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇವರ ಸಾರಥ್ಯದಲ್ಲಿ ‘ಸ್ವಸ್ತಿಕ್ ಕಲೋತ್ಸವ 2024’ ಕಾರ್ಯಕ್ರಮ ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿದರು. ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕ ಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ಸಾಜ ರಾಧಾಕೃಷ್ಣ ಆಳ್ವಾ ಪುತ್ತೂರು, ಸೀತಾರಾಮ ರೈ ಪದ್ಮಶ್ರೀ ಸೋಲಾರ್ ಪುತ್ತೂರು, ಅರುಣ್ ಕುವೆಲ್ಲೊ ಮಂಗಳೂರು, ದಿನೇಶ್ ಮೆದು ಪುತ್ತೂರು, ನರ್ಸಪ್ಪ ಪೂಜಾರಿ, ವಿಕಾಸ್ ಪುತ್ತೂರು, ಎಸ್ ಅಭಿಷೇಕ್ ವಿಟ್ಲ, ಮಾಧವ ಮಾವೆ, ತಾರಾನಾಥ ವಿಟ್ಲ, ರಘುಪತಿ ಪೈ ಇವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿಟ್ಲ ಮೆಸ್ಕಾಂ ಪವರ್ ಮೆನ್ ರವರಿಗೆ ಸಮ್ಮಾನ, ಬೃಹತ್ ಆಹಾರ ಮೇಳ, ಸಸ್ಯ ಮೇಳ, ಅಂತರ್ ರಾಜ್ಯ ಕಬಡ್ಡಿ ಪಂದ್ಯಾಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅರುಣ್ ವಿಟ್ಲ ಪ್ರಸ್ತಾಪಿಸಿ ಸ್ವಾಗತಿಸಿದರು. ರವಿಪ್ರಕಾಶ್ ವಂದಿಸಿದರು. ಹರೀಶ್ ಕಾರ್ಯಕ್ರಮ ನಿರೂಪಿಸಿದರು.