ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಪುಣೇದಹಳ್ಳಿ ಗ್ರಾಮದಲ್ಲಿ ಗೋಪೂಜೆಯ ಜೊತೆಗೆ ನೇಗಿಲು ಹಾಗೂ ಕೃಷಿ ಪರಿಕರಗಳ ಪೂಜೆ ನೆರವೇರಿಸುವ ಮೂಲಕ ಮನೆಮನೆಗಳಿಗೆ ತೆರಳಿ ಬಿಜೆಪಿ ಗ್ರಾಮ ಪರಿಕ್ರಮ ಯಾತ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಸಲಾಯಿತು.
ರಾಜ್ಯದ ಅನ್ನದಾತ ರೈತರು ಹಾಗೂ ಕುಲಕಸುಬು ಆಧಾರಿತ ಕುಟುಂಬಗಳಿಗೆ ಹಲವಾರು ಯೋಜನೆಗಳು ದೊರೆತಿದ್ದು, ಗ್ರಾಮೀಣ ಪ್ರದೇಶದ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಕೊಡಮಾಡಿರುವ ಮೋದಿ ಜೀ ಅವರ ಸರ್ಕಾರದ ಕೊಡುಗೆಗಳು ಹಾಗೂ ರೈತಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಮಗದೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಲಾಯಿತು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದಲಿಂಗಪ್ಪ, ತಾಲ್ಲೂಕು ಅಧ್ಯಕ್ಷರಾದ ಶ್ರೀ ಹನುಮಂತಪ್ಪನವರು, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಯೋಗೀಶಪ್ಪ, ಮುಖಂಡರಾದ ಶ್ರೀ ಶಾಂತೇಶಪ್ಪ, ಶ್ರೀ ಬಂಗಾರಿ ನಾಯ್ಕ್, ಶ್ರೀ ಸಿದ್ದರಾಮಪ್ಪ ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು, ತಾಯಂದಿರು ಹಾಗೂ ರೈತಬಂಧುಗಳು ಉಪಸ್ಥಿತರಿದ್ದರು.